ಶಿಶಿಕ್ಷು ತರಬೇತಿ ಸಂಸ್ಥೆ, ಚೆನ್ನೈ (ದಕ್ಷಿಣ ವಲಯ) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ ಬಾಪೂಜಿ ಪಾಲಿಟೆಕ್ನಿಕ್ನಲ್ಲಿ ಇಂದು ಬೆಳಗ್ಗೆ 9.30ಕ್ಕೆ ನೇರ ಸಂದರ್ಶನದಲ್ಲಿ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳ ನಡೆಯಲಿದೆ.
ಸರ್ಕಾರಿ ಕಂಪನಿಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ 2020, 2021, 2022, 2023 ಮತ್ತು 2024 ಸಾಲಿನಲ್ಲಿ ತೇರ್ಗಡೆ ಹೊಂದಿದ ಯಾವುದೇ ವಿಭಾಗದ (ಟೆಕ್ನಿಕಲ್ ಅಂಡ್ ನಾನ್ ಟೆಕ್ನಿಕಲ್) ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಅಭ್ಯರ್ಥಿಗಳು ಹಾಗೂ ಬಿಎ, ಬಿ.ಎಸ್ಸಿ ಬಿಕಾಂ, ಬಿಬಿಎ ಮತ್ತು ಬಿಸಿಎ ಪದವಿ ಪಡೆದ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವೆಬೈಟ್: www.boat-srp.com-Home page -News & Events section..
ವೀಕ್ಷಿಸಬಹುದು. ದೂ.ಸಂ: 9945251906, 9916013954 ಸಂಪರ್ಕಿಸಬಹುದು. NATS Portal (https://nats.education.gov.in & Google Form Link: (https://forms.gle/jkCKDErejAWsqbt69))
ನ್ಯಾಟ್ಸ್ ಪೋರ್ಟಲ್, ಗೂಗಲ್ ಫಾರಂ
ಲಿಂಕ್ ಅನ್ನು ಬಳಸಿ ನೋಂದಾಯಿಸಿ ಪ್ರಿಂಟ್ ಕಾಫಿಯನ್ನು ಕಡ್ಡಾಯವಾಗಿ ತರಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಾಲತಾ ನಾಡಿಗ್ ತಿಳಿಸಿದ್ದಾರೆ.