ದಾವಣಗೆರೆ, ಸೆ. 1 – ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 1 ರಂದು ಸ್ಪರ್ಧಾತ್ಮಕ ಪರೀಕ್ಷೆ ದಾವಣಗೆರೆ ನಗರದ 4 ಕೇಂದ್ರಗಳಲ್ಲಿ ನಡೆಯಿತು.
ಒಟ್ಟು 2209 ಅಭ್ಯರ್ಥಿಗಳು ನೋಂದಾಯಿಸಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮೊದಲ ಪತ್ರಿಕೆ ಪರೀಕ್ಷೆಗೆ 1872 ಹಾಜರಾಗಿ 337 ಗೈರಾಗಿದ್ದರು. ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ನಡೆದ ಎರಡನೇ ಪತ್ರಿಕೆಯ ಪರೀಕ್ಷೆಗೆ 1873 ಅಭ್ಯರ್ಥಿಗಳು ಹಾಜರಾಗಿ 336 ಅಭ್ಯರ್ಥಿಗಳು ಗೈರು ಹಾಜರಾಗಿರುವರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ತಿಳಿಸಿದ್ದಾರೆ.