ದಾವಣಗೆರೆ, ಆ.29- ನಗರದ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ಯುವಕನ ಶವ ಮೊನ್ನೆ ಪತ್ತೆಯಾಗಿದೆ. ಸಂಬಂಧಪಟ್ಟವರು ಬಡಾವಣೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ಮೃತನು ಗೋಧಿ ಮೈಬಣ್ಣ, ದುಂಡು ಮುಖ ಚಹರೆ ಹೊಂದಿದ್ದು, ಸಾಧಾರಣ ಕಪ್ಪು ತಲೆಕೂದಲು, ಗಡ್ಡ ಇರುತ್ತದೆ. ಬಲಗೈ ಹೆಬ್ಬೆರಳು ಗಾಯವಾಗಿದ್ದು, ಬಲಗೈ ಮುಂಗೈ ಹೊರಭಾಗದಲ್ಲಿ ಹಾರ್ಟ್ ಸಿಂಬಲ್ ಚಿಹ್ನೆ, ಒಳಭಾಗದಲ್ಲಿ ಲಕ್ಷ್ಮಿ, ಅಮ್ಮ ಅಂತ ಹಚ್ಚೆ ಇರುತ್ತದೆ. ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯೆ ಓಂ ಸಿಂಬಲ್ ಹಚ್ಚೆ ಇರುತ್ತದೆ. ಎಡಗೈ ಮುಂಗೈ ಮೇಲೆ KM ಹಚ್ಚೆ ಇರುತ್ತದೆ. ಎಡಗೈ ಮುಂಗೈನಲ್ಲಿ ಆಸ್ಪತ್ರೆಯ ಕ್ಯಾನಲ್ ಇರುತ್ತದೆ. ಹಸಿರು ಬಣ್ಣದ ತುಂಬು ತೋಳಿನ ಶರ್ಟ್, ಗ್ರೇ ಕಲರ್ ಸ್ಫೋರ್ಟ್ಸ್ ಪ್ಯಾಂಟ್, ಬ್ಲೂ ಕಲರ್ ನಿಕ್ಕರ್ ಧರಿಸಿರುತ್ತಾನೆ.
January 8, 2025