ದಾವಣಗೆರೆ ನಗರದ ಹಳೇಪೇಟೆಯಲ್ಲಿರುವ ಚಿಂದೋಡಿ ಎಸ್. ವೀರಣ್ಣ ಮತ್ತು ಚಿಂದೋಡಿ ಕುಟುಂಬದವರ ನಿವಾಸದಲ್ಲಿ ಇಂದು ಬೆಳಗ್ಗೆ 10.30ಕ್ಕೆ ಅಣ್ಣಿಗೇರಿ ಚಿಂದೋಡಿ ಮನೆತನದ ದಾಸೋಹ ಪರಂಪರೆಯ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀಗಳು, ವಿರಕ್ತ ಮಠದ ಬಸವ ಪ್ರಭು ಶ್ರೀಗಳು, ಉರುಗಾದ್ರಿ ಸಂಸ್ಥಾನ ಮಠದ ಕರಿಬಸವ ರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ.