ನಗರದಲ್ಲಿ ಇಂದು ಅವಧೂತ ಗುರುಗಳಿಂದ ಆಶೀರ್ವಚನ

ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಸಿದ್ಧಿ ಸಮಾಧಿ ಯೋಗದಿಂದ ಶ್ರಾವಣ ಮಾಸದ ಪ್ರಯುಕ್ತ ಅವಧೂತ ಗುರುಗಳಿಂದ ಆಶೀರ್ವಚನ ಕಾರ್ಯಕ್ರಮವು ಇಂದು ಸಂಜೆ 5.30ಕ್ಕೆ ನಗರದ ಪಿ.ಬಿ. ರಸ್ತೆಯಲ್ಲಿರುವ ಗೀತಾಮಂದಿರದಲ್ಲಿ ನಡೆಯಲಿದೆ.

ಮೈಸೂರಿನ ಶ್ರೀ ಅರ್ಜುನ್ ಅವಧೂತ ಗುರೂಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು.

ದಾವಣಗೆರೆ ಎಸ್.ಎಸ್.ವೈ. ಬ್ರಹ್ಮೋಪದೇಶಕರಾದ ರೇಣುಕಾ ಮಾತಾಜಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಸ್ಎಸ್‌ವೈ ಸಾಧಕರು ಹಾಗೂ ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಅಂಧ ಮಕ್ಕಳು ಹಾಗೂ ವಿದ್ಯಾರ್ಥಿಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.

error: Content is protected !!