ದಾವಣಗೆರೆ,ಜು.30- ಇಲ್ಲಿನ ಆಜಾದ್ ನಗರದ 1ನೇ ಮೇನ್, 11ನೇ ಕ್ರಾಸ್ ನಲ್ಲಿರುವ ಮೆಹಬೂಬಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಅಂದಾಜು 2 ಲಕ್ಷ ರೂ. ಬೆಲೆ ಬಾಳುವ 2 ಕೆ.ಜಿ. 150 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪಿ.ಎಸ್.ಐ ಪ್ರಮೀಳಮ್ಮ ಹೆಚ್. ಮತ್ತು ಸಿಬ್ಬಂದಿ ತಂಡವು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಿದೆ. ಆರೋಪಿ ಮೆಹಬೂಬಿ ಮೇಲೆ ಈಗಾಗಲೇ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ವಿಚಾರದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 110/2016ರ ಪ್ರಕರಣದಲ್ಲಿ 6 ತಿಂಗಳು ಸಜೆ, 5000 ದಂಡ ಶಿಕ್ಷೆಗೆ ಒಳಗಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯವು 5000/- ದಂಡ ವಿಧಿಸಿರುತ್ತದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.