ದಾವಣಗೆರೆ, ಜು. 19 ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸಹಾಯಕ ಸೆಕ್ಷನ್ ಆಫೀಸರ್, ಲೆಕ್ಕ ಪರಿಶೋಧನಾ ಅಧಿಕಾರಿ, ಲೆಕ್ಕ ಪತ್ರ ಅಧಿಕಾರಿ, ಆದಾಯ ತೆರಿಗೆ, ಕೇಂದ್ರ ಅಬಕಾರಿ ಮತ್ತು ಸಿಬಿಐಯಲ್ಲಿ ಇನ್ಸ್ಪೆಕ್ಟರ್, ಇಡಿ ನಲ್ಲಿ ಎಇಓ ಮತ್ತು ಸಿಬಿಐ, ಸಿಬಿಎನ್ನಲ್ಲಿ ಸಬ್ಇನ್ಸ್ಪೆಕ್ಟರ್, ಅಂಚೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಗುಮಾಸ್ತ, ಅಂಚೆ ಇಲಾಖೆ ಸಹಾಯಕ, ವಿಂಗಡನೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ https://ssc.gov.in or www.ssckkr.kar.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇದೇ ದಿನಾಂಕ 24 ಕೊನೆಯ ದಿನವಾಗಿರುತ್ತದೆ.
ವಿವರಕ್ಕೆ ಸಹಾಯವಾಣಿ – 080-25502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂರವಾಣಿ ಸಂಖ್ಯೆ : 08192259446 ಇಲ್ಲಿಗೆ ಸಂಪರ್ಕಿ ಸುವಂತೆ ಉದ್ಯೋಗಾಧಿಕಾರಿ ಡಿ. ರವೀಂದ್ರ ತಿಳಿಸಿದ್ದಾರೆ.