ಹರಿಹರ, ಜು. 19- ಹರಿಹರದ ಯುವ ಉದಯೋನ್ಮುಖ ಕ್ರೀಡಾಪಟು, ಎಸ್‌ಜೆಸಿಪಿಎಸ್ ಶಾಲೆಯ ಒಂಭತ್ತನೇಯ ತರಗತಿಯ ವಿದ್ಯಾರ್ಥಿನಿ ಕೆ.ವೈ.ಸೃಷ್ಟಿ ಅವರ ಸಾಧನೆ ಪರಿಗಣಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ಪಡೆದಿರುವ ಶಿವಮೊಗ್ಗದ `ಕರ್ನಾಟಕ ಯೂತ್ ವೆಲ್ ಫೇರ್ ಅಸೋಸಿಯೇಷನ್’ ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಶಿವಮೊಗ್ಗದ ಖಾಸಗಿ ಹೋಟೆಲ್ ನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸರಿಗಮಪ ಸೀಜನ್ 19 ರ ರನ್ನರ್ ಅಪ್ ಶಿವನಿ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಡಾ.ಕರಾಟೆ ಎ.ಪಿ. ಶ್ರೀನಾಥ್, ಡಾ.ಎಸ್. ನಂದನ್, ಡಾ. ಕೃಷ್ಣ ಕುಲಾಲ್, ಡಾ. ಶ್ರೀಕಾಂತ್ ಮಂಗಳಾ ಅವರಿಗೆ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅವಾರ್ಡ್ಸ್ ಪ್ರಶಸ್ತಿ ನೀಡಲಾಯಿತು.
ಡಾ.ಶ್ರೀನಿವಾಸ, ಶಿವಕುಮಾರ ಶೆಟ್ಟಿ, ಕಾರ್ಯಕ್ರಮದ ರೂವಾರಿ ನವೀನ್ ಮತ್ತಿತರರು ಇದ್ದರು.