ದಾವಣಗೆರೆ, ಜು. 19- ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ 24ನೇ ವಾರ್ಷಿಕ ಘಟಿಕೋತ್ಸವ ದಲ್ಲಿ ಉಪ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರು ನಗರದ ಶ್ರೀಮತಿ ರಶ್ಮಿ ಮೊತ್ಕೂರ್ ಅವರಿಗೆ ಪಿಹೆಚ್ಡಿ ಪದವಿ ಪ್ರದಾನ ಮಾಡಿದರು. ರಶ್ಮಿ ಮೊತ್ಕೂರ್, ಸ್ಥಳೀಯ ಜಿಎಂಐಟಿ ಕಾಲೇಜಿನ ಸಿಎಸ್ಇ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎನ್. ವೀರಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ `ಎ ಹೈಬ್ರಿಡ್ ಅಪ್ರೋಚ್ ಫಾರ್ ಲಂಗ್ ಕ್ಯಾನ್ಸರ್ ಕ್ಲಾಸಿಫಿಕೇಷನ್ ಯೂಸಿಂಗ್ ಡೀಪ್ ಲರ್ನಿಂಗ್ ಅಂಡ್ ಮೆಟಾಹ್ಯೂರಿಸ್ಟಿಕ್ ಮೆಥೆಡ್ಸ್’ ಎಂಬ ಮಹಾ ಪ್ರಬಂಧಕ್ಕೆ ಪಿಹೆಚ್ಡಿ ಪದವಿ ಪಡೆದಿರುತ್ತಾರೆ.
ಶ್ರೀಮತಿ ರಶ್ಮಿ, ನಿವೃತ್ತ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್. ಲಿಂಗಾರೆಡ್ಡಿ ಹಾಗೂ ಶ್ರೀಮತಿ ಪ್ರಮೀಳಾ ದಂಪತಿ ಪುತ್ರಿ.