ದಾವಣಗೆರೆ, ಜು.18- ದುಮ್ಮಿ ಹುಸೇನ್ ಸಾಬ್ ಚಾರಿಟೇಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ವತಿಯಿಂದ ಇದೇ ದಿನಾಂಕ 21ರ ಬೆಳಗ್ಗೆ 10.30ಕ್ಕೆ ನಗರದ ರೋಟರಿ ಬಾಲ ಭವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಟ್ರಸ್ಟಿನ ಅಧ್ಯಕ್ಷ ಡಾ.ಡಿ. ಅಬ್ದುಲ್ ಬುಡೇನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ತಂಜೀಮುಲ್ ಮುಸ್ಲಿಮೀನ್ ಸಮಿತಿಯ ಅಧ್ಯಕ್ಷ ದಾದು ಸೇಠ್, ಸದಸ್ಯ ಜನಾಬ್ ಸೈಯದ್ ಇಮ್ರಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.