ವೃತ್ತಿ ರಂಗಭೂಮಿ ರಂಗಾಯಣ, ಬಾಪೂಜಿ ವಿದ್ಯಾ ಸಂಸ್ಥೆ ಮತ್ತು ಎಸ್.ಎಸ್.ಕೇರ್ ಟ್ರಸ್ಟ್ನಿಂದ ಶಾಲಾ ಮಕ್ಕಳಿಗಾಗಿ ಜೆ.ಜೆ.ಎಂ ಮೆಡಿಕಲ್ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಇಂದಿನಿಂದ ಮೂರು ದಿನ ಶಾಲಾ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ನಡೆಯಲಿವೆ.
ಇಂದು ಬೆಳಗ್ಗೆ 10ಕ್ಕೆ ಮಕ್ಕಳ ರಾಮಾಯಣ, ನಾಳೆ ಶುಕ್ರವಾರ ಕರ್ಣ-ಅರ್ಜುನರ ಕಾಳಗ, ನಾಡಿದ್ದು ದಿನಾಂಕ 20ರ ಬೆಳಗ್ಗೆ 9ಕ್ಕೆ `ಸಿರಿಧಾನ್ಯವೇ ಸರಿಧಾನ್ಯ’ ಪ್ರದರ್ಶನ ಏರ್ಪಡಿಸಲಾಗಿದೆ. ನಾಟಕ ಪ್ರದರ್ಶನ ಶಾಲಾ ಮಕ್ಕಳಿಗೆ ಉಚಿತವಾಗಿರುತ್ತದೆ.