ದಾವಣಗೆರೆ, ಜು. 11- ನಗರದ ಮೋತಿ ವೀರಪ್ಪ ಕಾಲೇಜು ಹಿಂಭಾಗದ ಜೈನ್ ಲ್ಯಾಬ್ ಕೆಳಗಿರುವ ಡಾ. ಎನ್.ಹೆಚ್. ಕೃಷ್ಣ ಅವರ ಕ್ಲಿನಿಕ್ನಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ನಾಡಿದ್ದು ದಿನಾಂಕ 13ರ ಶನಿವಾರ ಉಚಿತ ಶ್ವಾಸಕೋಶ ತಪಾಸಣೆ (ಸ್ಪೈರೋಮೀಟರ್) ಹಾಗೂ ಉಚಿತ ವೈದ್ಯರ ಸಲಹೆ ನೀಡಲಾಗುವುದು. ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಈ ತಪಾಸಣೆ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 77605 62311.
March 13, 2025