ಸಿಲಿಂಡರ್ ಸ್ಫೋಟ: ದಂಪತಿ ಸಾವು

ದಾವಣಗೆರೆ, ಜು.10- ನಗರದ ಎಸ್ಒಜಿ ಕಾಲೋನಿಯ ಮನೆಯೊಂದರಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲ್ಲೇಶಪ್ಪ (64), ಲಲಿತಮ್ಮ (58) ದಂಪತಿ ಸಾವು ಕಂಡಿದ್ದಾರೆ. ಮೊನ್ನೆಯಷ್ಟೇ ಸ್ಫೋಟದಲ್ಲಿ ಗಾಯಗೊಂಡಿದ್ದ ಪಾರ್ವತಮ್ಮ ಸಾವನ್ನಪ್ಪಿದ್ದರು. ಲಲಿತಮ್ಮ ಅವರು ಸೋಮವಾರ ರಾತ್ರಿ ಮೃತಪಟ್ಟರೆ, ಅವರ ಪತಿ ಮಲ್ಲೇಶಪ್ಪ ಅವರು ಮಂಗಳವಾರ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾರೆ. 

error: Content is protected !!