ಡೆಂಘಿ : ಕಾಲೇಜು ವಿದ್ಯಾರ್ಥಿನಿ ಸಾವು

ಡೆಂಘಿ : ಕಾಲೇಜು ವಿದ್ಯಾರ್ಥಿನಿ ಸಾವು

ಸಾಸ್ವೆಹಳ್ಳಿ, ಜೂ. 28-  ಡೆಂಘಿಯಿಂದ ವಿದ್ಯಾರ್ಥಿನಿ ಯೊಬ್ಬರು ಬುಧವಾರ ತಡರಾತ್ರಿ ಸಾವಿಗೀಡಾದ ಘಟನೆ ಸಮೀಪದ ಹನುಮನಹಳ್ಳಿಯಲ್ಲಿ ನಡೆದಿದೆ. ಅನುಷಾ (18) ದ್ವಿತೀಯ ಪಿಯುಸಿಯಲ್ಲಿ ಶೇ.93 ರಷ್ಟು ಅಂಕ ಗಳಿಸಿ ಇಂಜಿನಿಯರಿಂಗ್ ಸೇರುವ ಬಯಕೆ ಹೊಂದಿದ್ದರು. 

ಶನಿವಾರ ಬೆಳಗ್ಗೆ ಜ್ವರದಿಂದ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿರುವುದಿಲ್ಲ ಎಂದು ಪೋಷಕರು ತಿಳಿಸಿದರು. ಮೃತರ ತಾಯಿ ಸಾಸ್ವೆಹಳ್ಳಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.

error: Content is protected !!