ನಾಳೆ ಸೇಂಟ್‌ ಅಲೋಸಿಯಸ್‌ ಶಾಲೆ ಉದ್ಘಾಟನೆ

ನಾಳೆ ಸೇಂಟ್‌ ಅಲೋಸಿಯಸ್‌ ಶಾಲೆ ಉದ್ಘಾಟನೆ

ಹರಿಹರ, ಜೂ. 23 – ಸಮೀಪದ ಅಮರಾವತಿಯ ಸೇಂಟ್‌ ಅಲೋಸಿಯೇಸ್‌ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ಸೇಂಟ್‌ ಅಲೋಸಿಯಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಉದ್ಘಾಟನೆ ಹಾಗೂ ಸಂತ ಅಲೋಸಿಯಸ್‌ ಗೊಂಜಾಗ ಅವರ 457ನೇ ಜಯಂತಿ ಕಾರ್ಯಕ್ರಮ ನಾಡಿದ್ದು ದಿನಾಂಕ 25ರಂದು ಮಧ್ಯಾಹ್ನ 12ಕ್ಕೆ ನಡೆಯಲಿದ್ದು, ರಾಜ್ಯಪಾಲ ಥಾವರ ಚಂದ್‌ ಗೆಹ್ಲೋಟ್‌ ಭಾಗವಹಿಸುವರು ಎಂದು ಶಾಲೆಯ ಉಪಪ್ರಾಚಾರ್ಯ ಫಾ. ವಿನೋದ್‌ ಎ.ಜೆ. ತಿಳಿಸಿದರು.

ಶಿವಮೊಗ್ಗ ಧರ್ಮಕ್ಷೇತ್ರದ ಬಿಷಪ್ ರೆವರೆಂಡ್‌ ಫ್ರಾನ್ಸಿಸ್‌ ಸೆರಾವೊ ಎಸ್‌.ಜೆ., ಶಾಸಕ ಬಿ.ಪಿ.ಹರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಪ್ರಾಂತ್ಯದ ರೆವರೆಂಡ್‌ ಫಾ.ಡ. ಯಾನಿಸಿಯಸ್‌ ವಜ್‌ ಎಸ್‌.ಜೆ. ಅಧ್ಯಕ್ಷತೆ ವಹಿಸುವರು. ಅತಿಥಿಗಳು ಸಂತ ಅಲೋಸಿಯಸ್‌ ಗೊಂಜಾಗ ಅವರ ಮೂರ್ತಿ ಹಾಗೂ ಶಾಲೆಯ ನಾಮಫಲಕ ಅನಾವರಣ ಮಾಡುವರು ಎಂದು  ತಿಳಿಸಿದರು.

ಶತಮಾನಕ್ಕೂ ಹೆಚ್ಚು ಅವಧಿಯಿಂದ ಸಂಸ್ಥೆ ದೇಶ ಹಾಗೂ ವಿದೇಶಗಳಲ್ಲಿ ಶಿಕ್ಷಣ ಪ್ರಸಾರ ಕಾರ್ಯ ಮಾಡುತ್ತಿದೆ. ಈ ಶಾಲೆಯಲ್ಲಿ ದೇಶಿಯ ಭಾಷೆಗಳ ಜೊತೆಗೆ ಫ್ರೆಂಚ್‌, ನೇಪಾಳಿ ಹಾಗೂ ಇತರೆ ಭಾಷೆಗಳಲ್ಲೂ ಬೋಧನೆ ಮಾಡಲಾಗುತ್ತದೆ ಎಂದು ವಿದ್ಯಾಸಂಸ್ಥೆಯ ಸಲಹೆಗಾರ್ತಿ ಗ್ರೇಸ್‌ ನರೋನಾ ಹೇಳಿದರು.

ಪದವಿ ಪೂರ್ವ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಟಿ.ಎಸ್‌., ಅಧ್ಯಾಪಕರಾದ ಸನ್ನಿ ಗುಡಿನೋ, ಅಬ್ದುಲ್‌ ರಹಮಾನ್‌ ಇದ್ದರು.

error: Content is protected !!