ಯಲವಟ್ಟಿ : ಮುಖ್ಯಶಿಕ್ಷಕ ರವೀಂದ್ರಚಾರಿ ವಯೋನಿವೃತ್ತಿ

ಯಲವಟ್ಟಿ : ಮುಖ್ಯಶಿಕ್ಷಕ ರವೀಂದ್ರಚಾರಿ ವಯೋನಿವೃತ್ತಿ

ಮಲೇಬೆನ್ನೂರು, ಜೂ. 23- ಯಲವಟ್ಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿಗಳಿಯ ರವೀಂದ್ರಚಾರಿ ಅವರು ಸೇವೆಯಿಂದ ವಯೋನಿವೃತ್ತಿ ಹೊಂದಿದರು.

ಈ ನಿಮಿತ್ತ್ಯ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಿಇಓ ಹನುಮಂತಪ್ಪ ಅವರು, ರವೀಂದ್ರಚಾರಿ ಅವರ ನಿರಂತರ ಹಾಗೂ ನಿಸ್ವಾರ್ಥತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಮುಖಂಡರಾದ ಡಿ.ಯೋಮಕೇಶ್ವರಪ್ಪ, ಜಿ.ಆಂಜನೇಯ, ಕೆ.ನರಸಪ್ಪ, ನಿವೃತ್ತ ಶಿಕ್ಷಕ ಜಿ.ಬಸಪ್ಪ, ಹಿರಿಯರಾದ ಜಿ.ಮುರುಗೆಪ್ಪ ಗೌಡ್ರು, ಡಿ.ಚನ್ನಪ್ಪ ಗೌಡ್ರು, ದುಗ್ಗತ್ತಿ ಚಂದ್ರಪ್ಪ, ಕೆ.ಬಿ.ನಾಗರಾಜಪ್ಪ, ಎಂ.ಜಯ್ಯಣ್ಣ, ಈರಾನಾಯ್ಕ, ಪರಮೇಶ್ವರನಾಯ್ಕ ಮತ್ತಿ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಪತ್ರಕರ್ತ ಪ್ರಕಾಶ್, ಮೂರ್ತ್ಯೆಪ್ಪ, ಗಂಗಾಧರಾಚಾರಿ, ಶಾಲಾ ಶಿಕ್ಷಕರಾದ ನಾಗಮಂಜುಳಾ ಜೋಷಿ, ಎ.ಜಿ.ರಾಘವೇಂದ್ರ, ಅನುರಾಧ ಗೌಡ್ರು ಮತ್ತು  ರವೀಂದ್ರಚಾರಿ ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟರು.

error: Content is protected !!