ಭಾನುಪ್ರಕಾಶ್‌ಗೆ ಜಿಲ್ಲಾ ಭಾಜಪ ಶ್ರದ್ಧಾಂಜಲಿ

ದಾವಣಗೆರೆ, ಜೂ.17- ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅವರ ನಿಧನಕ್ಕೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ   ಶ್ರದ್ಧಾಂಜಲಿ ಸಲ್ಲಿಸಿದೆ. ನಿಕಟಪೂರ್ವ ರಾಜ್ಯ ಪ್ರಕೋಷ್ಠ ಸಂಯೋಜಕರೂ,  ಆರ್.ಎಸ್.ಎಸ್.ನ   ಸ್ವಯಂ ಸೇವಕರೂ  ಆಗಿದ್ದ ಭಾನುಪ್ರಕಾಶ್  ಅವರ ಆತ್ಮಕ್ಕೆ  ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ  ಪಕ್ಷವು ಪ್ರಾರ್ಥಿಸಿದೆ.

error: Content is protected !!