ನಗರದಲ್ಲಿಂದು ಆರೋಗ್ಯ ತಪಾಸಣೆ

ದಾವಣಗೆರೆ : ರೋಟರಿ ಸಂಸ್ಥೆ, ವಿದ್ಯಾನಗರ ಇನ್ನರ್‌ವ್ಹೀಲ್ ಸಂಸ್ಥೆ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರೀತಿ ಆರೈಕೆ ಟ್ರಸ್ಟ್, ರಿದಿ ಡೆಂಟಿಸ್ಟ್ರಿ ದಾವಣಗೆರೆ ಮತ್ತು ಹೂವಿನಹಡಗಲಿ ಆರೋಗ್ಯಧಾಮ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಸಲಾಗುವುದು.

ತಪಾಸಣಾ ಶಿಬಿರದಲ್ಲಿ ಹೃದಯರೋಗ, ನರರೋಗ, ಮೂತ್ರಪಿಂಡ, ಕ್ಯಾನ್ಸರ್, ಕೀಲು, ಮೂಳೆ, ಸ್ತ್ರೀರೋಗ ಮತ್ತು ಚರ್ಮರೋಗ, ಕಿಡ್ನಿ ಸ್ಟೋನ್, ಬಿಪಿ., ಶುಗರ್, ಇಸಿಜಿ, ಇಕೋ ಸ್ಕ್ಯಾನಿಂಗ್ ಮುಂತಾದವುಗಳಿಗೆ ಉಚಿತ ತಪಾಸಣೆ ಮತ್ತು ಔಷಧಿ ಹಾಗೂ ಮಾತ್ರೆ ವಿತರಿಸಲಾಗುವುದು. ಶಾಲೆಯ ಮಕ್ಕಳಿಗೆ ದಂತ ತಪಾಸಣೆ ಮಾಡಲಾಗುವುದು ಮತ್ತು ರಕ್ತದ ಗುಂಪು ತಪಾಸಣೆ ಮಾಡಿಕೊಡಲಾಗುವುದು. ಶಿಬಿರದಲ್ಲಿ ಲಭ್ಯವಿರುವ ಔಷಧಗಳನ್ನು ಉಚಿತವಾಗಿ ನೀಡಲಾಗುವುದು.  97317 82463, 84315 41487, 91644 65550.

error: Content is protected !!