ವಿಭಾಗೀಯ ಡಾಕ್ ಅದಾಲತ್

ದಾವಣಗೆರೆ ಜೂ.13 – ದಾವಣಗೆರೆ ಅಂಚೆ ವಿಭಾಗೀಯ ಡಾಕ್-ಅದಾಲ ತ್ತನ್ನು ಇದೇ ದಿನಾಂಕ 20 ರಂದು ಮಧ್ಯಾಹ್ನ 4 ಗಂಟೆಗೆ ನಗರದ ಮಂಡಿಪೇಟೆಯ ಗಡಿಯಾರ ಕಂಬದ ಹತ್ತಿರವಿರುವ ಪ್ರಧಾನ ಅಂಚೆ ಕಚೇರಿಯ ಮೊದಲನೇ ಮಹಡಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಸಲಾಗುತ್ತದೆ.  

ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಮತ್ತು ಸಲಹೆಗಳನ್ನು ಇದೇ ದಿನಾಂಕ 20 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಅಂಚೆ ಅಧೀಕ್ಷಕರ ಕಚೇರಿಗೆ ಸಲ್ಲಿಸಬೇಕೆಂದು ಅಂಚೆ ಚಂದ್ರಶೇಖರ್ ತಿಳಿಸಿದ್ದಾರೆ.

error: Content is protected !!