ನೀಟ್ ಫಲಿತಾಂಶ : ತನಿಖೆಗೆ ಎನ್‌ಎಸ್‌ಯುಐ ಒತ್ತಾಯ

ದಾವಣಗೆರೆ, ಜೂ. 9-  ಕಳೆದ ದಿನಾಂಕ 4ರಂದು ಪ್ರಕಟಗೊಂಡ ನೀಟ್ ಫಲಿತಾಂಶವನ್ನು ಗಮನಿಸಿದರೆ ಅನೇಕ ಪ್ರಶ್ನೆಗಳು ಮೂಡುತ್ತಿದ್ದು, ಫಲಿತಾಂಶ ಗೊಂದಲದ ಗೂಡಾ ಗಿದೆ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ತಿಳಿಸಿದೆ.

ಫಲಿತಾಂಶದಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದು, ಈ 67 ವಿದ್ಯಾರ್ಥಿಗಳ ಬಗ್ಗೆ 12 ಜನ ವಿದ್ಯಾರ್ಥಿಗಳು ಒಂದೇ ಎಕ್ಸಾಮ್ ಸೆಂಟರ್ ವಿದ್ಯಾರ್ಥಿಗಳಾಗಿರುತ್ತಾರೆ. ಸುಮಾರು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಒಂದೇ ರಾಜ್ಯದ, ಒಂದೇ ಜಿಲ್ಲೆಯ, ಒಂದೇ ಕೇಂದ್ರದಲ್ಲಿ 720ಕ್ಕೆ 720 ಅಂಕ ಪಡೆದಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿರುತ್ತದೆ ಎಂದು ಒಕ್ಕೂಟದ ಕ್ಯಾಂಪೇನ್ ಕಮಿಟಿಯ ಅಧ್ಯಕ್ಷ ತಹೀರ್ ಸಮೀರ್ ಸಂಶಯ ವ್ಯಕ್ತಪಡಿಸಿದ್ದಾರೆ.

ನೀಟ್ ಪರೀಕ್ಷೆಯಲ್ಲಿ 180 ಪ್ರಶ್ನೆಗಳಿದ್ದು, ಸರಿ ಉತ್ತರಕ್ಕೆ 4 ಅಂಕ, ತಪ್ಪು ಉತ್ತರಕ್ಕೆ ಮೈನಸ್ ಒಂದು ಅಂಕವಿರುತ್ತದೆ. ಆದರೆ ಈ ಫಲಿತಾಂಶದಲ್ಲಿ ಸುಮಾರು ವಿದ್ಯಾರ್ಥಿಗಳು 717, 718, 719 ಅಂಕ ಪಡೆದಿರುತ್ತಾರೆ. ಇದು ಸಾಧ್ಯವಿಲ್ಲ. ಪ್ರಶ್ನೆ ಪತ್ರಿಕೆ ಸಹ ಸೋರಿಕೆಯಾಗಿದೆ ಎಂದು ಕೆಲವು ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಪರೀಕ್ಷೆಗೂ ಮುನ್ನವೇ ಈ ಸುದ್ದಿ ಹರಿದಾಡಿದೆ. ಅನೇಕ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದು, ಯಾವ ಆಧಾರದ ಮೇಲೆ ಕೊಟ್ಟಿದ್ದಾರೆ ಎಂದು ಸ್ಪಷ್ಟ ಮಾಹಿತಿಯನ್ನು ಸಹ ಎನ್‌ಟಿಎ ನೀಡಿಲ್ಲ ಎಂದು ದೂರಿದ್ದಾರೆ.

ಇದೇ ದಿನಾಂಕ 14ನೇ ರಂದು ಹೊರಬರಬೇಕಾಗಿದ್ದ ಫಲಿತಾಂಶವನ್ನು ಜೂ. 4ನೇ ರಂದೇ ಪ್ರಕಟಿಸಿದ್ದು, ಅದೇ ದಿನ ಲೋಕಸಭಾ ಚುನಾವಣಾ ಫಲಿತಾಂಶವಿದ್ದು, ಇದರ ಪ್ರಯುಕ್ತ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸಿಸಿ ದ್ದಾರೆ. ಆದ್ದರಿಂದ ಫಲಿತಾಂಶವು, ಅದೇ ದಿನ ಪ್ರಕಟಗೊಂಡ ಬಗ್ಗೆ ಸೂಕ್ತ ತನಿಖೆಯಾಗಬೇಕು, ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು. ಇಲ್ಲವಾದರೆ ಎನ್.ಎಸ್.ಯು.ಐ. ನಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!