ದಾವಣಗೆರೆ ಸಂಗೀತ – ನೃತ್ಯ ಪರಿಷತ್ತಿನ ಅಧ್ಯಕ್ಷರಾಗಿ ಡಾ. ಮಂಗಳಾ ಶೇಖರ್

ದಾವಣಗೆರೆ ಸಂಗೀತ – ನೃತ್ಯ ಪರಿಷತ್ತಿನ ಅಧ್ಯಕ್ಷರಾಗಿ ಡಾ. ಮಂಗಳಾ ಶೇಖರ್

ದಾವಣಗೆರೆ, ಜೂ. 6 – ನಗರದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ದಾವಣಗೆರೆ ಸಂಗೀತ – ನೃತ್ಯ ಪರಿಷತ್ತಿನ ಅಧ್ಯಕ್ಷರಾಗಿ ವಿದುಷಿ ಡಾ. ಮಂಗಳಾ ಶೇಖರ್ ಆಯ್ಕೆಯಾಗಿದ್ದಾರೆ. ಮಂಗಳಾ ಶೇಖರ್ ಅವರು ಆಯುರ್ವೇದಿಕ್ ವೈದ್ಯೆಯಾಗಿದ್ದು, ತಮ್ಮ ಭರತಾಂಜಲಿ ಸಂಸ್ಥೆ ಅಡಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ದಾವಣಗೆರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯಾಭ್ಯಾಸ ನೀಡಿದ್ದು, ಸಂಸ್ಥೆ ವತಿಯಿಂದ ಸಾಕಷ್ಟು ಕಾರ್ಯಕ್ರಮ ನೀಡಿರುತ್ತಾರೆ.

ಇತ್ತೀಚೆಗೆ ಕುವೆಂಪು ಭವನದಲ್ಲಿ ಸಭೆ ಸೇರಿದ ಸಮಾನ ಮನಸ್ಕರು, ಸಂಗೀತ ಮತ್ತು ನೃತ್ಯಕ್ಕೆ ಜಿಲ್ಲೆಯಲ್ಲಿ ಸಂಘಟನೆಯ ಅಗತ್ಯವನ್ನು ಮನಗಂಡು ಒಕ್ಕೂಟ ಸ್ಥಾಪಿಸಲು ನಿರ್ಧರಿಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಹಾಗೂ ಇನ್ನಿತರ  ಪದಾಧಿಕಾರಿಗಳ ಆಯ್ಕೆಯನ್ನೂ ನಡೆಸಲಾಯಿತು. ಕಾರ್ಯದರ್ಶಿಯಾಗಿ ಶಾರದಾ ಸಂಗೀತ ಮತ್ತು ನೃತ್ಯ ವಿದ್ಯಾಲಯದ ಸಂಸ್ಥಾಪಕ  ವಿದ್ವಾನ್ ರಾಜಗೋಪಾಲ ಭಾಗವತ ಅವರನ್ನು ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ನಮನ ಅಕಾಡೆಮಿಯ ನೃತ್ಯ ಗುರು ಮಾಧವಿ ಡಿ.ಕೆ.ಅವರನ್ನು ಆಯ್ಕೆ ಮಾಡಲಾಗಿದೆ. ನಗರದಲ್ಲಿ  ಕೆಲವು ದಶಕಗಳಿಂದ ಭರತನಾಟ್ಯ ಹಾಗೂ ಸಂಗೀತ ಶಿಕ್ಷಣ ನೀಡುತ್ತಿರುವ ನಾಟ್ಯಭಾರತಿ ಸಂಸ್ಥೆಯ ಪ್ರತಿನಿಧಿಯಾಗಿ ಶ್ರೀನಿಧಿ ಕುಲಕರ್ಣಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಸಂಘಟನಾ ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಕೆ.ಎನ್, ರಾಜಶೇಖರ ಬೆನ್ನೂರು, ಸಹಕಾರ್ಯದರ್ಶಿಯಾಗಿ ಅನುಶ್ರೀ ಸಂಗೀತ ಶಾಲೆಯ ವಿದುಷಿ ವೀಣಾ ಹೆಗಡೆ,  ಸಹ ಖಜಾಂಚಿಯಾಗಿ  ಕಲಾಕಲ್ಪ ಸಂಸ್ಥೆಯ ಶುಭಾ ಐನಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕ ಮಂಡಳಿಯಲ್ಲಿ ಚಿರಂತನ ಅಕಾಡೆಮಿಯ ಮಾಧವ ಪದಕಿ,  ತಪಸ್ಯಾ ನೃತ್ಯ ಶಾಲೆಯವ ವಿದುಷಿ ಲಕ್ಷ್ಮೀ, ಮುರಳಿ ಘಟಿಕರ್, ರಾಜಶೇಖರ ಸಕ್ಕಟ್ಟು, ಸಲಹಾ ಮಂಡಳಿಯಲ್ಲಿ ಡಾ. ಎಚ್. ಬಿ. ಮಂಜುನಾಥ್, ಸದಾನಂದ ಹೆಗಡೆ,  ರಾಷ್ಟ್ರೋತ್ಥಾನ ಶಾಲೆಯ ಜಯಣ್ಣ ಇತರರು ನಮನ ಅಕಾಡೆಮಿ ಅಧ್ಯಕ್ಷ ಗೋಪಾಲಕೃಷ್ಣ ಕೆ ಏನ್ ಉಪಸ್ಥಿತರಿದ್ದರು.

error: Content is protected !!