ಸಾದರ ಸಾಧನಾ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಜೂ. 6 – ಸಾದರ ನೌಕರರ ಬಳಗ ಸಂಸ್ಥೆಯ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ. 90 ಹಾಗೂ ಪಿಯುಸಿಯಲ್ಲಿ ಶೇ.85 ಕ್ಕಿಂತ ಅತಿ ಹೆಚ್ಚು ಅಂಕ ಪಡೆದ ಸಾದರ ವಿದ್ಯಾರ್ಥಿಗಳಿಗೆ ಸಾದರ ಸಾಧನಾ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್ಸೆಸ್ಸೆಲ್ಸಿ (ಸಿಬಿಎಸ್‌ಇ) ಹಾಗೂ ರಾಜ್ಯ ಪಠ್ಯಕ್ರಮಕ್ಕೆ ಪ್ರತ್ಯೇಕವಾಗಿ ಮತ್ತು ಪಿಯುಸಿ (ಕಲಾ, ವಿಜ್ಞಾನ, ವಾಣಿಜ್ಯ) ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅರ್ಜಿಯನ್ನು ಕೆ. ನಾಗಪ್ಪ ಅಧ್ಯಕ್ಷರು, ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರಿ ಸೌಹಾರ್ದ ಬ್ಯಾಂಕ್, # 2000/ಎ28, 16 ಬಿ ಕ್ರಾಸ್, ತರಳಬಾಳು ಬಡಾವಣೆ, ದಾವಣಗೆರೆ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: :9844501366, 9886339984 ಸಂಪರ್ಕಿಸಬಹುದಾಗಿದೆ‌.

error: Content is protected !!