‘ಹಮಾರೆ ಬಾರಾಹ್’ಮೇಲೆ ನಿಷೇಧ

ದಾವಣಗೆರೆ, ಜು. 6 – ‘ಹಮಾರೆ ಬಾರಾಹ್’ ಚಿತ್ರದ ಟ್ರೈಲರ್ ಹಾಗೂ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರ ಈ ಚಿತ್ರದ ಬಿಡುಗಡೆ ಮೇಲೆ ನಿಷೇಧ ಹೇರಿದೆ. ಈ ಚಿತ್ರ ಹಾಗೂ ಟ್ರೈಲರ್ ಅನ್ನು ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ / ಸಾಮಾಜಿಕ ಜಾಲತಾಣ / ಸಿನಿಮಾ ಮಂದಿರಗಳು / ಖಾಸಗಿ ಟಿವಿ ಚಾಲನ್‌ ಗಳು / ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. 

ಯಾರಾದರೂ ಪ್ರಸಾರ ಮಾಡಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ವಾರ ಇಲ್ಲವೇ ಮುಂದಿನ ಆದೇಶ ಹೊರಡಿಸುವವರೆಗೆ ನಿಷೇಧ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!