ಚಿತ್ರದುರ್ಗ, ಮೇ 27 – ಐತಿಹಾಸಿಕ ಹಿನ್ನೆಲೆಯ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಜಗದ್ಗುರು ಶ್ರೀ ಜಯದೇವ ಮುರಘರಾಜೇಂದ್ರ ಮಹಾಸ್ವಾಮಿಗಳ ಹೆಸರಿನಲ್ಲಿ ನಾಡಿನಲ್ಲಿ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅನೇಕ ವಿದ್ಯಾರ್ಥಿ ನಿಲಯಗಳನ್ನು ಅಂದು ಸ್ಥಾಪಿಸಿದ್ದು, ಅವೆಲ್ಲವೂ ಈಗಲೂ ವ್ಯವಸ್ಥಿತವಾಗಿ ಸಾಗುತ್ತಿವೆ.
ಅದರಂತೆ ಚಿತ್ರದುರ್ಗದ ಮುರುಘಾ ಮಠದಲ್ಲಿರುವ ಶ್ರೀ ಜಯದೇವ ಉಚಿತ ವಸತಿಯುತ ಪ್ರಸಾದ ನಿಲಯಕ್ಕೆ 2024-25ನೇ ಸಾಲಿನ ಪ್ರವೇಶಕ್ಕಾಗಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇರಲಿಚ್ಛಿಸುವವರು ಶ್ರೀಮಠದ ವ್ಯವಸ್ಥಾಪಕರು ಹಾಗೂ ನಿಲಯ ಪಾಲಕರನ್ನು ಸಂಪರ್ಕಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 99014 89105, 95384 21222 ಸಂಪರ್ಕಿಸಬಹುದು.