ಕಡದಕಟ್ಟೆ ಬಳಿ ಕ್ಯಾಂಟರ್ ಲಾರಿ ಡಿಕ್ಕಿ : ಸಾವು

ಹೊನ್ನಾಳಿ,ಮೇ 27- ಇಲ್ಲಿಗೆ ಸಮೀಪದ ಎಚ್. ಕಡದಕಟ್ಟೆಯ ಹತ್ತಿರ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ  ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ  ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು,  ಈತನನ್ನು  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ  ಫಲಕಾರಿಯಾಗದೆ ಕೊನೆಯುಸಿರೆಳೆದಿ ದ್ದಾನೆ.  ಮೇ 19ರ ಭಾನುವಾರ ರಾತ್ರಿ 7.30ರ ಸಮಯದಲ್ಲಿ ಈ ಘಟನೆ ಸಂಭವಿಸಿತ್ತು.

error: Content is protected !!