ನಗರದಲ್ಲಿ ಇಂದು ಶ್ರೀ ಗುರು ರೇಣುಕರ ಯುಗಮಾನೋತ್ಸವ ಕಾರ್ಯಕ್ರಮ

ನಗರದಲ್ಲಿ ಇಂದು ಶ್ರೀ ಗುರು ರೇಣುಕರ ಯುಗಮಾನೋತ್ಸವ ಕಾರ್ಯಕ್ರಮ

ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಗಂಗಾವತಿ ಮುಖ್ಯ ಅತಿಥಿ

ದಾವಣಗೆರೆ, ಮೇ 24- ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಹಾಗೂ ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ ವತಿಯಿಂದ  ನಾಳೆ ದಿನಾಂಕ 25ರಂದು ಶ್ರೀ ಗುರು ರೇಣುಕರ ಯುಗಮಾನೋತ್ಸವ, 591ನೇ ಬಸವ ಜಯಂತಿ, ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿ.ವೀ.ಲಿಂ.ಏ.ಪ. ಅಧ್ಯಕ್ಷ ರೇವಣ್ಣ ಬಳ್ಳಾರಿ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಗುರುಭವನದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಪಾಂಡೋ ಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ವಹಿಸಲಿದ್ದಾರೆ. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಗಂಗಾವತಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಹರ್ಷಿತ್ ಇಂಡಸ್ಟ್ರೀ ಮಾಲೀಕ ಶ್ರೀಹರಿ ಎನ್.ಗೌರಿಪುರ ಆಗಮಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಚನ ಜೀವನಾ  ಮೃತ ಕುರಿತು ಕುಸುಮ ಲೋಕೇಶ್, ಸತ್ಯ ಶುದ್ಧ ಕಾಯಕ ಕುರಿತು ಶಕುಂತಲಾಜಿ ಕೆ. ಉಪನ್ಯಾಸ ನೀಡಲಿದ್ದಾರೆ. ನಿ.ನ್ಯಾಯಮೂರ್ತಿ ಅರಳಿ ನಾಗರಾಜ್ ಗಂಗಾವತಿ ಅವರಿಗೆ ಶ್ರೀ ಜಗಜ್ಯೋತಿ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕಾಯಕ ಯೋಗಿ ಬಸವಶ್ರೀ ಪ್ರಶಸ್ತಿ ಹಾಗೂ ಕಾಯಕಯೋಗಿ ಶರಣೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 165 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದುದು ಎಂದು ವಿ.ವೀ.ಲಿಂ.ಏ.ಪ. ಕಾರ್ಯಾಧ್ಯಕ್ಷ ಇಂದೂಧರ ನಿಶಾನಿಮಠ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಕುಂತಲ ಜಿ.ಕೆ., ಬಸವರಾಜ ಸಿರಿಗೆರೆ, ಶಿವಕುಮಾರ ಶೆಟ್ಟರ್, ರುದ್ರಮ್ಮ ಇದ್ದರು.

error: Content is protected !!