ಜಿಲ್ಲೆಯ ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.95.92 ಫಲಿತಾಂಶ

ದಾವಣಗೆರೆ, ಮೇ 22-    ಜಿಲ್ಲೆಯ  ಒಟ್ಟು 22 ವಸತಿ ಶಾಲೆಗಳಲ್ಲಿ ಸುಮಾರು 1004 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿ 963 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಶೇ.95.92ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಶೇ.100 ರಷ್ಟು ಫಲಿತಾಂಶ ಪಡೆದ ವಸತಿ ಶಾಲೆಗಳು: ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವರ್ಗ) ಮಾದನಬಾವಿ, ಹೊನ್ನಾಳಿ ತಾಲ್ಲೂಕು,  ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವರ್ಗ) ಮುಗ್ಗಿದರಾಗಿಹಳ್ಳಿ, ಜಗಳೂರು ತಾಲ್ಲೂಕು, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ (ಪ.ಜಾತಿ) ಎಚ್.ಕಡೆದಕಟ್ಟೆ, ಹೊನ್ನಾಳಿ ತಾಲ್ಲೂಕು,  ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ.ವರ್ಗ) ವಡೇರಹಳ್ಳಿ, ದಾವಣಗೆರೆ ತಾಲ್ಲೂಕು,  ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ (ಪ.ವರ್ಗ) ಉದ್ದಘಟ್ಟ, ಜಗಳೂರು ತಾಲ್ಲೂಕು, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ (ಪ.ವರ್ಗ) ಕೊಂಡಜ್ಜಿ, ಹರಿಹರ ತಾಲ್ಲೂಕು. 

600 ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು : ಜೀವಿತ ಎಂ.ಎನ್ (610), ಸ್ಫೂರ್ತಿ ಪಿ. (608), ಯಶೋಧ ಹೆಚ್.ಬಿ. (607),  ರಾಜೇಶ್ವರಿ ಈ. (602) ಅಂಕವನ್ನು ಪಡೆದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ
ಕೆ. ನಾಗರಾಜ ತಿಳಿಸಿದ್ದಾರೆ.

error: Content is protected !!