ಅಂತರ್‌ ಜಿಲ್ಲಾ ಚೆಸ್‌ ಸ್ಪರ್ಧೆಯಲ್ಲಿ ಆಕಾಶ್‌ ಪ್ರಥಮ, ವರದ್ ದ್ವಿತೀಯ

ಅಂತರ್‌ ಜಿಲ್ಲಾ ಚೆಸ್‌ ಸ್ಪರ್ಧೆಯಲ್ಲಿ ಆಕಾಶ್‌ ಪ್ರಥಮ, ವರದ್ ದ್ವಿತೀಯ

ದಾವಣಗೆರೆ, ಮೇ 22- ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಗರದ ಗುರುಭವನದಲ್ಲಿ ನಿನ್ನೆ ಯು-19 ಚದುರಂಗ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

ರಾಜ್ಯದ ವಿವಿಧೆಡೆಯಿಂದ 130ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದು, ಸ್ವಿಸ್ ಲೀಗ್ ಮಾದರಿ ಪಂದ್ಯಾವಳಿಯಲ್ಲಿ ಹಾಸನದ ಎಂ.ಎಚ್ ಆಕಾಶ್ (ಪ್ರಥಮ), ದಾವಣಗೆರೆಯ ವರದ್ ಕುಬ್ಸದ್ (ದ್ವಿತೀಯ), ಶಿವಮೊಗ್ಗದ ವಿಲಾಸ್ ಆಂಡ್ರೆ (ತೃತೀಯ) ಸ್ಥಾನ ಗಳಿಸಿದ್ದಾರೆ.

7 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಬಳ್ಳಾರಿಯ ಎಸ್.ಎಸ್ ಶೌರ್ಯ ಸೌರಭ (ಪ್ರಥಮ), ಸಮರ್ಥ್ ಪೂಜಾರ್ (ದ್ವಿತೀಯ), ಎಂ.ಎಂ ಜನನಿ (ತೃತೀಯ) ಸ್ಥಾನ ಪಡೆದಿದ್ದಾರೆ.

10 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಚಿತ್ರದುರ್ಗದ ಆಧ್ಯಾ ಡಿ.ಎಂ ಗೌರಿ (ಪ್ರಥಮ), ದಾವಣಗೆರೆಯ ಮೊಹಮ್ಮದ್ ಆರ್ಯನ್ (ದ್ವಿತೀಯ), ವಿ.ಎಸ್ ಮಣಿಕಂಠ (ತೃತೀಯ) ಬಹುಮಾನ ಗಳಿಸಿದರು.

 12 ವರ್ಷದ ವಿಭಾಗದಲ್ಲಿ ಶಿವಮೊಗ್ಗದ ಎಚ್.ಎಸ್‌. ರಾಘವೇಂದ್ರ ಭೂಷಣ್ (ಪ್ರಥಮ), ಸಿದ್ದಾರ್ಥ್ ಸೋಮು ಸಂಗನಗೌಡ್ರು (ದ್ವಿತೀಯ) ಮತ್ತು ವಿರಾಟ್ ಎಂ ಜಾವಲಿ (ತೃತೀಯ) ಬಹುಮಾನ ಪಡೆದರು.

14 ವರ್ಷದೊಳಗಿನ ವಿಭಾಗದಲ್ಲಿ ಹುಬ್ಬಳ್ಳಿಯ ಶ್ರೇಯಸ್ ಹುಬ್ಬಳ್ಳಿ (ಪ್ರಥಮ), ಎಂ.ಎಸ್ ಅವ್ಯತ್ (ದ್ವಿತೀಯ), ಎಸ್.ಡಿ ಜೀವನ ಗೌಡ (ತೃತೀಯ) ಸ್ಥಾನ ಗಳಿಸಿದ್ದು, ಎಂ.ಎನ್‌. ಶರತ್ ಕುಮಾರ್ ನಾಲ್ಕನೇ ಸ್ಥಾನ ಮತ್ತು ಭುವನ್ ಎಸ್ ಸೂರ್ಯ ಐದನೇ ಸ್ಥಾನ ಪಡೆದರು.

16 ವರ್ಷದೊಳಗಿನ ವಿಭಾಗದಲ್ಲಿ ದಾವಣಗೆರೆಯ ಎಂ.ಎಸ್ ದಿಗಂತ್ (ಪ್ರಥಮ), ವೈ ಗ್ರೀಷ್ಮ (ದ್ವಿತೀಯ), ಎಸ್‌.ಆರ್‌. ಪ್ರಜ್ವಲ್ (ತೃತೀಯ), ಎಸ್.ಎಸ್ ಸುಚೇತನ್ ನಾಲ್ಕನೇ ಸ್ಥಾನ ಮತ್ತು ಜಿ.ಎನ್. ವೇದಾಂತ್ 5ನೇ ಸ್ಥಾನ ಪಡೆದಿದ್ದಾರೆ.

ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ಇದೇ ವೇಳೆ 80ಕ್ಕೂ ಹೆಚ್ಚು ವಿಶೇಷ ಬಹುಮಾನ ನೀಡಲಾಯಿತು.

ಆಯೋಜಕ ಯುವರಾಜ್, ಮಂಜುಳಾ ಯುವರಾಜ್, ವೈ.ಎಂ ತರುಣ್, ಅಂತರರಾಷ್ಟ್ರೀಯ ತೀರ್ಪುಗಾರ  ಪ್ರಾಣೇಶ್, ಯಾದವ್, ವಿಜಯ್ ಕುಮಾರ್ ಇನ್ನಿತರರಿದ್ದರು.

error: Content is protected !!