ಹರಿಹರ ತಾಲ್ಲೂಕು ರೈತರ ಖಾತೆಗೆ ಬೆಳೆ ಹಾನಿ ಬಾಕಿ 2.55 ಕೋಟಿ ರೂ.ಜಮಾ

ಹರಿಹರ, ಮೇ 17-  ತಾಲ್ಲೂಕಿನಲ್ಲಿ ಬೆಳೆ ಹಾನಿಯಾದ  ರೈತರ ಬಾಕಿ  ಒಟ್ಟು  2.55 ಕೋಟಿ ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದರು. 

ಜನತಾವಾಣಿಯೊಂದಿಗೆ ದೂರವಾಣಿಯಲ್ಲಿ ಅವರು ಮಾತನಾಡುತ್ತಾ ತಾಲ್ಲೂಕಿನಲ್ಲಿ ಬೆಳೆ ಹಾನಿಯಾದ ಒಟ್ಟು 4268 ಫಲಾನುಭವಿಗಳ ಪಟ್ಟಿಯನ್ನು ಸಿದ್ದತೆ ಮಾಡಿ ಸರ್ಕಾರಕ್ಕೆ ಕಳಿಸಲಾಗಿತ್ತು. ಅದರಲ್ಲಿ ಮೊದಲ ಕಂತಿನಲ್ಲಿ 80 ಲಕ್ಷದ 27 ಸಾವಿರದ 929 ರೂಪಾಯಿ, ಸರಿ ಸುಮಾರು ಒಬ್ಬರಿಗೆ 2  ಸಾವಿರದಂತೆ ರೈತರ ಖಾತೆಗೆ ಜಮಾ ಮಾಡಲಾಗಿತ್ತು. ತದನಂತರ 3208 ರೈತ ಫಲಾನುಭವಿಗಳಿಗೆ ಒಟ್ಟು 1 ಕೋಟಿ 75 ಲಕ್ಷದ 24 ಸಾವಿರದ 611 ರೂಪಾಯಿ ಫಲಾನುಭವಿಗಳ ಖಾತೆಗೆ ಒಬ್ಬರಿಗೆ ಸರಿ ಸುಮಾರು 4  ಸಾವಿರ ಜಮಾ ಮಾಡಿಲಾಗಿದ್ದು‌, ಒಟ್ಟು ಇಲ್ಲಿಯವರೆಗೂ 2 ಕೋಟಿ 55 ಲಕ್ಷದ 52 ಸಾವಿರದ 540 ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು. ಇನ್ನೂ ತಾಲ್ಲೂಕಿನ 568 ಫಲಾನುಭವಿಗಳು ತಮ್ಮ ಆಧಾರ್‌ ಮತ್ತು ಬ್ಯಾಂಕ್ ಖಾತೆ ಸೇರಿದಂತೆ, ಸರ್ಕಾರ ಕೇಳಿದ ದಾಖಲೆಗಳನ್ನು ಇದುವರೆಗೂ ಒದಗಿಸದೇ ಇರುವುದರಿಂದ ಅವರ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಅವರು ದಾಖಲೆ ಸಲ್ಲಿಸಿ ದರೆ  ಖಾತೆಗೆ ನೇರವಾಗಿ ಹಣ ರವಾನಿಸುವ ಕಾರ್ಯ ವನ್ನು ಮಾಡಲಾಗುತ್ತದೆ ಎಂದು ಹೇಳಿದರು. 

error: Content is protected !!