ದಾವಣಗೆರೆ, ಮೇ 14 – ಹುಬ್ಬಳ್ಳಿ ಮತ್ತು ದಾವಣಗೆರೆ ಮಾರ್ಗವಾಗಿ ವಾಸ್ಕೋದಿಂದ ಯಶವಂತಪುರ ಹೋಗುವ ರೈಲು ಗಾಡಿಯನ್ನು ಬೆಂಗಳೂರಿನ ವರೆಗೆ ವಿಸ್ತರಿಸಿ, ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಆಗಿ ಪರಿವರ್ತಿಸುವಂತೆ ನೈರುತ್ಯ ರೈಲ್ವೆ ವಲಯದ ಪ್ರಯಾಣಿಕರ ಸಂಘ ಒತ್ತಾಯಿಸಿದೆ. 17309-17310 ಸಂಖ್ಯೆಯ 2 ರೈಲುಗಳು ತಮ್ಮ ಸೇವೆಯನ್ನು ಬೆಂಗಳೂರು ವರೆಗೆ ವಿಸ್ತರಿಸಿಕೊಂಡರೆ ಸರ್ಕಾರಿ ಕೆಲಸಕ್ಕೆ ತೆರಳುವ ಹರಿಹರ ಮತ್ತು ದಾವಣಗೆರೆ ಭಾಗದ ಜನರಿಗೆ ಅನುಕೂಲವಾ ಗುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
January 16, 2025