ಹಳೇದೇವರ ಹೊನ್ನಾಳಿ ಗ್ರಾಮದಲ್ಲಿ ರಾಮಾನುಜಾಚಾರ್ಯರ ರಥೋತ್ಸವ

ಹಳೇದೇವರ ಹೊನ್ನಾಳಿ ಗ್ರಾಮದಲ್ಲಿ    ರಾಮಾನುಜಾಚಾರ್ಯರ ರಥೋತ್ಸವ

ಹೊನ್ನಾಳಿ, ಮೇ 14 – ತಾಲ್ಲೂಕಿನ ಹಳೇ ದೇವರ ಹೊನ್ನಾಳಿ ಗ್ರಾಮದಲ್ಲಿ   ಶ್ರೀ ರಾಮಾನುಜಾಚಾರ್ಯರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ಸೇರಿದಂತೆ, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಬಾಳೆಕಂದು, ಅಡಿಕೆ ಹಿಂಗಾರ, ವಿವಿಧ ಹೂವುಗಳಿಂದ, ಪುಷ್ಪಮಾಲಿಕೆಗಳಿಂದ ರಥವನ್ನು ಭರ್ಜರಿಯಾಗಿ ಅಲಂಕರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಯಲ್ಲಿ ರಥ ಹರಿಯಿತು. ದೇವಸ್ಥಾನದ ಬಳಿ ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. 

ವೈಷ್ಣವ ಸಮಾಜದ ದಾವಣಗೆರೆ ಜಿಲ್ಲಾಧ್ಯಕ್ಷ  ಮಲೇಕುಂಬಳೂರು ಕೆ.ಆರ್. ವರದರಾಜಪ್ಪ, ಹಳೇದೇವರ ಹೊನ್ನಾಳಿ ಗ್ರಾಮದ ಶ್ರೀ ರಾಮಾನು ಜಾಚಾರ್ಯರ ಮಠದ ಅಧ್ಯಕ್ಷ  ಎಸ್.ಕೆ. ಗೋಪಾಲಯ್ಯ, ಹೊಸ ದೇವರ ಹೊನ್ನಾಳಿ ಎಂ.ಎಸ್. ರಮೇಶ್ ಸೇರಿದಂತೆ, ಅನೇಕರು ಇದ್ದರು.

error: Content is protected !!