ದಾವಣಗೆರೆ, ಮೇ 7 – ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯ ಕೆಲ ಮತಗಟ್ಟೆಗಳ ಮತಯಂತ್ರಗಳಲ್ಲಿ ತಾಂತ್ರಿಕ ಲೋಪ ಕಾಣಿಸಿಕೊಂಡಿದೆ.
ಅಣಕು ಮತದಾನಕ್ಕೆ ಮುಂಚೆಯೇ ಕೆಲವು ಯಂತ್ರ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ. 3 ಬ್ಯಾಲೆಟ್ ಯುನಿಟ್ ಹಾಗೂ ಕೆಲ ವಿವಿಪ್ಯಾಟ್ಗಳಲ್ಲಿ ಸಮಸ್ಯೆ ಯಾಗಿದೆ. ಕೆಲವು ಕಂಟ್ರೋಲ್ ಯುನಿಟ್ಗಳಲ್ಲಿ ತೊಂದರೆ ಯಾಗಿದೆ ಎಂದವರು ಹೇಳಿದ್ದಾರೆ.
ಹೆಚ್ಚಿನ ಯಂತ್ರಗಳನ್ನು ಬದಲಿಸುವ ಅಗತ್ಯ ಕಂಡು ಬಂದಿಲ್ಲ. ಬೆಳಿಗ್ಗೆ 7 ಗಂಟೆಯಿಂದಲೇ ಶಾಂತಿಯುತ ಮತದಾನ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.