ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ನಡೆಯುತ್ತಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡಲಿದೆ.
ಇಂದು ಬೆಳಿಗ್ಗೆ 7 ಗಂಟೆಗೆ ಶ್ರೀ ವಿರಕ್ತ ಮಠದಿಂದ ಆರಂಭಗೊಳ್ಳುವ ಪ್ರಭಾತ್ ಪೇರಿಯು ಮದಕರಿ ನಾಯಕ ವೃತ್ತ, ಛಲವಾದಿ ಕೇರಿಗಳಲ್ಲಿ ಸಂಚರಿಸಲಿದೆ.
ನಾಳೆ ಬುಧವಾರ ಮುಂಜಾನೆ 7 ಗಂಟೆಗೆ ಶ್ರೀ ವಿರಕ್ತ ಮಠದಿಂದ ಆರಂಭಗೊಳ್ಳುವ ಪ್ರಭಾತ್ ಪೇರಿಯು ಮದಕರಿ ನಾಯಕ ವೃತ್ತ, ತಳವಾರ ಕೇರಿ, ಕುರುಬರ ಕೇರಿ, ಬೂದಾಳ್ ರಸ್ತೆ, ಕಾಳಿಕಾದೇವಿ ರಸ್ತೆಯಲ್ಲಿ ಸಂಚರಿಸಲಿದೆ. ನಾಡಿದ್ದು ದಿನಾಂಕ 9ರ ಗುರುವಾರ ಕಾಳಿಕಾದೇವಿ ರಸ್ತೆ, ಆನೆಕೊಂಡ ಪೇಟೆ, ಹಳೇಪೇಟೆ, ಎಸ್.ಕೆ.ಪಿ. ರಸ್ತೆಯಿಂದ ವಿರಕ್ತ ಮಠ ತಲುಪಲಿದೆ.