ದಾವಣಗೆರೆ, ಮೇ 5 – ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಸಮಾಜದ ಜನರ ಶಾಂತಿ ನೆಮ್ಮದಿಗಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮನವಿ ಮಾಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಸ್ಮರಿಸಿದರು.
ಪಕ್ಷದ ಸಹಾಯದಿಂದ ಬಡವರಿಗೆ 16 ಸಾವಿರ ಆರ್ಸಿಸಿ ಮನೆ, ಕುಡಿಯುವ ನೀರಿಗಾಗಿ ಟಿವಿ ಸ್ಟೇಷನ್ ಕೆರೆ ಮತ್ತು ಕುಂದವಾಡ ಕೆರೆ ನಿರ್ಮಿಸಿ ಜನರ ದಾಹ ತಣಿಸಿದ್ದಾರೆ. ಆದ್ದರಿಂದ ಅಭಿವೃದ್ಧಿ ಕಾಳಜಿ ಹೊಂದಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಡಾ. ಪ್ರಭಾ ಅವರು ಸಂಸದರಾದರೆ, ಜಿಲ್ಲೆಗೆ ಏರ್ಪೋರ್ಟ್, ಐಟಿ-ಬಿಟಿ ಕಂಪನಿಗಳನ್ನು ತರಲಿದ್ದು, ಇದರಿಂದ ಈ ಭಾಗದ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಕಾಂಗ್ರೆಸ್ ಇಂಟಕ್ ಜಿಲ್ಲಾಧ್ಯಕ್ಷ ಕೆ.ಎಂ. ಮಂಜುನಾಥ್, ಎಸ್.ಎಂ. ಜಯಪ್ರಕಾಶ್, ಎಚ್. ಮಂಜುನಾಥ್, ಗೊಲ್ಲರಹಳ್ಳಿ ಚೌಡಪ್ಪ, ಅಲ್ಲಾವಲಿ ಮುಜಾಹಿದ್, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ಗಿರಿಧರ್, ಎಸ್. ಹನುಮಂತಪ್ಪ, ಗೋಪಾಲ್, ಎಚ್. ಗಣೇಶ್, ಗೋವಿಂದ, ನವೀನ್, ಮುಬಾರಕ್ ಗೋಷ್ಠಿಯಲ್ಲಿದ್ದರು.