ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಾರ್ಥಿಸಿ ಕಾಂಗ್ರೆಸ್ ಮುಖಂಡ ವೀರಭದ್ರಸ್ವಾಮಿ ಮಟ್ಟಿಕಲ್ ಅವರು ಇಂದು ದೀಡು ನಮಸ್ಕಾರ ಹಾಕಲಿದ್ದಾರೆ.
ಇಂದು ಬೆಳಿಗ್ಗೆ 11.30 ಗಂಟೆಗೆ ಹಳೇಪೇಟೆಯ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಿಂದ ಹೊರಟು ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಗುಗ್ಗಳದೊಂದಿಗೆ ದೀಡು ನಮಸ್ಕಾರ ನಡೆಸ ಲಿರುವ ವೀರಭದ್ರಸ್ವಾಮಿ ಅವರು ಬಾಯಿಗೆ ಶಸ್ತ್ರ, ನಾಲಿಗೆಗೆ ಶಿವದಾರ ಧರಿಸಲಿದ್ದಾರೆ. ಬಳಿಕ ಶ್ರೀ ವೀರಭದ್ರಸ್ವಾಮಿ ದೇವ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗೆ ಅನುಗ್ರಹಿಸುವಂತೆ ದೇವರಲ್ಲಿ ಪ್ರಾರ್ಥಿಸಲಿದ್ದಾ