ದಾವಣಗೆರೆ, ಏ. 26 – ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ 28ರಂದು ನಗರಕ್ಕೆ ಆಗಮಿಸಿ, ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ, ಕಾನೂನು ಸುವ್ಯವಸ್ಥೆ ಕಾಪಾಡಲು ನಾಳೆ ದಿನಾಂಕ 27, 28 ರಂದು ನಗರದ ವಾಹನ ಸಂಚಾರ ಮಾರ್ಗಗಳಲ್ಲಿ ಭಾರೀ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.
ಹೈಸ್ಕೂಲ್ ಮೈದಾನದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಹೊಸ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಬಸ್ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜಗಳೂರು ಕಡೆಯಿಂದ ಬರುವ ಬಸ್ಗಳು ಜಗಳೂರು ಬಸ್ ನಿಲ್ದಾಣ, ಹದಡಿ ರಸ್ತೆಯಿಂದ ಬರುವ ಖಾಸಗಿ ಬಸ್ ಮಾಗನೂರು ಬಸಪ್ಪ ಮೈದಾನ, ಚಿತ್ರದುರ್ಗದ ಕಡೆಯಿಂದ ಬರುವ ಬಸ್ಗಳು ಎಪಿಎಂಸಿ ದನದ ಮಾರುಕಟ್ಟೆಯಲ್ಲಿ ನಿಲುಗಡೆ ಮಾಡಬೇಕು.
ವಾಹನ ಸಂಚಾರ ಮಾರ್ಗಗಳ ಬದಲಾವಣೆ : ಹರಿಹರ ಕಡೆಯಿಂದ ಬರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳು ಹೆದ್ದಾರಿ ಬೈಪಾಸ್ ರಸ್ತೆ ಬಾಡಾ ಕ್ರಾಸ್ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಬರುವುದು ಮತ್ತು ಇದೇ ಮಾರ್ಗದಲ್ಲಿ ವಾಪಸ್ ಸಂಚರಿಸಬೇಕು.
ಚಿತ್ರದುರ್ಗದಿಂದ ಬರುವ ಬಸ್ ಗಳು ಬಾಡಾ ಕ್ರಾಸ್ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗ ವಾಗಿ ಬಾಡಾ ಕ್ರಾಸ್ ನಿಂದ ಮಾರ್ಗ ಬದಲಿಸಬೇಕು. ಹರಪನಹಳ್ಳಿ, ಬೆಂಡಿ ಕೆರೆ, ಜಗಳೂರಿನಿಂದ ಬರುವ ಬಸ್ಗಳು ಬೇತೂರು ರಸ್ತೆ ಹೊಸ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ವಾಪಸ್ ಹೋಗುವುದು.
ಕೆಎಸ್ಆರ್ಟಿಸಿ ಸಂಚಾರ ಹೊಸ ನಿಲ್ದಾಣದಿಂದ ಕಾರ್ಯಾಚರಣೆ
ಹೈಸ್ಕೂಲ್ ಮೈದಾನದಲ್ಲಿ ನಾಳೆ ಭಾನುವಾರ ಆಯೋಜಿಸಿರುವ ಚುನಾವಣಾ ರ್ಯಾಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರಕ್ಕಾಗಿ ಹೈಸ್ಕೂಲ್ ಮೈದಾನದಲ್ಲಿ ಇದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಇಂದು ಮತ್ತು ನಾಳೆ ಮಾತ್ರ ನಿರ್ಮಾಣ ಹಂತದಲ್ಲಿನ ಹೊಸ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇಲ್ಲಿಂದಲೇ ಎಲ್ಲಾ ಬಸ್ಗಳು ಕಾರ್ಯಾಚರಣೆ ಮಾಡಲಿವೆ ಎಂದು ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಇ ಶ್ರೀನಿವಾಸ್ಮೂರ್ತಿ ತಿಳಿಸಿದ್ದಾರೆ.
ಕೊಂಡಜ್ಜಿ ಮಾರ್ಗವಾಗಿ ದಾವಣಗೆರೆಗೆ ಬರುವ ಬಸ್ಗಳು ಹರಿಹರ ಮಾರ್ಗವಾಗಿ ಹೆದ್ದಾರಿ ಮೂಲಕ ಬಾಡಾ ಕ್ರಾಸ್ ಮೂಲಕ ಹೊಸ ಬಸ್ ಸ್ಟ್ಯಾಂಡ್ಗೆ ಬರಬೇಕು. ಆದರೆ ಕೊಂಡಜ್ಜಿ ರಸ್ತೆ, ಶಿಬಾರ ರಸ್ತೆಯಲ್ಲಿ ಓಡಾಡುವ ವಾಹನಗಳು ಆರ್.ಟಿ.ಓ ಸರ್ಕಲ್ ನಿಂದ ಫ್ಲೈಓವರ್ ಮೂಲಕ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಬರುವುದನ್ನು ನಿಷೇಧಿಸಿದೆ.
ಶಾಮನೂರು ಕ್ರಾಸ್ನಿಂದ ಶಾರದಾಂಭ ಸರ್ಕಲ್ವರೆಗೆ ವಾಹನಗಳು ಬರುವುದು, ನಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಬಸ್ ಮತ್ತು ಲಾರಿ ಓಡಾಟ ನಿಷೇಧಿಸಿದೆ. ಹದಡಿ ರಸ್ತೆ ಮಾರ್ಗವಾಗಿ ಬರುವ ವಾಹನಗಳು ಸ್ಟೇಡಿಯಂ ಎಆರ್ಜಿ ಕಾಲೇಜ್ ಕ್ರಾಸ್ವರೆಗೆ ಬಂದು ವಾಪಸ್ ಹೋಗುವುದು. ಹಳೇ ಕೋರ್ಟ್ ರಸ್ತೆಯಲ್ಲಿರುವ ಆಟೋ ನಿಲ್ದಾಣವನ್ನು ಈ ಎರಡು ದಿನ ಬೇರೆ ಕಡೆ ಸ್ಥಳಾಂತರಿಸಿ ಕೊಳ್ಳಬೇಕು. ಇಲ್ಲಿ ಆಟೋ ನಿಲುಗಡೆ ಸ್ಥಗಿತಗೊಳಿಸಿದೆ.
ಈ ಮಾರ್ಗಗಳಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತ. ಹಳೆ ಪಿ.ಬಿ. ರಸ್ತೆಯಲ್ಲಿ ಬಾತಿ ಕೆರೆಯಿಂದ ಎಪಿಎಂಸಿ ಫ್ಲೈ ಓವರ್, ಎವಿಕೆ ರಸ್ತೆ ಪಿ.ಜೆ.ಕ್ರಾಸ್ ನಿಂದ ವಿಜಯಾ ಹೋಟೆಲ್ ಆಟೋ ಸ್ಟ್ಯಾಂಡ್, ಹಳೇ ಕೋರ್ಟ್ ರಸ್ತೆಯ ಎಸಿ ಸರ್ಕಲ್ ನಿಂದ ಅಂಬೇಡ್ಕರ್ ಸರ್ಕಲ್,ವಿದ್ಯಾರ್ಥಿ ಭವನದ ವರೆಗೆ, ಹಳೆ ಐ.ಬಿ. ರಸ್ತೆಯ ಅರಸು ಸರ್ಕಲ್ ನಿಂದ ಜಯದೇವ ವೃತ್ತದವರೆಗೆ, ಅಶೋಕ ರಸ್ತೆಯಲ್ಲಿ ಗಾಂಧಿ ಸರ್ಕಲ್ನಿಂದ ಜಯದೇವ ಸರ್ಕಲ್ ವರೆಗೆ, ಅರುಣಾ ಸರ್ಕಲ್ನಿಂದ ರಾಂ ಅಂಡ್ ಕೋ ಸರ್ಕಲ್, ಸಿಜೆ ಆಸ್ಪತ್ರೆ ರಸ್ತೆ, ಸ್ಪಂದನಾ ಜ್ಯೂಸ್ ಸ್ಟಾಲ್, ಸಿಜಿ ಆಸ್ಪತ್ರೆ ರಸ್ತೆ, ಬ್ಲಡ್ ಬ್ಯಾಂಕ್ ರಸ್ತೆ ಈ ಮಾರ್ಗಗಳಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದೆ. ಈ ಮಾರ್ಗಗಳಲ್ಲಿ ಪರ್ಯಾಯ ಮಾರ್ಗ ಬಳಸಿ ಬಾತಿ ಕಡೆಯಿಂದ ಗಾಂಧಿ ವೃತ್ತ, ಶಾಮನೂರು, ಲಕ್ಷ್ಮಿ ಫ್ಲೋರ್ ಮಿಲ್, ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ, ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಗಾಂಧಿ ಸರ್ಕಲ್, ಹಳೆ ಪಿ.ಬಿ. ರಸ್ತೆ, ಹಳೆ ಕೋರ್ಟ್ ರಸ್ತೆ, ಎವಿಕೆ ರಸ್ತೆ ಮಾರ್ಗವಾಗಿ ಬಾರದೆ ಇತರೆ ಮಾರ್ಗ ಅನುಸರಿಸಿ. ಹಾವೇರಿ, ಹರಿಹರ ಕಡೆಯಿಂದ ಬರುವ ಲಾರಿ ಮತ್ತು ಇತರೆ ವಾಹನಗಳು ಬಾತಿಯಿಂದ ಹೆದ್ದಾರಿ ಮಾರ್ಗವಾಗಿ ಮುಂದೆ ಹೋಗಬೇಕು.