ದಾವಣಗೆರೆ, ಏ.26- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಲಂ ಜನಾಂದೋಲನ ಹಾಗೂ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯಿಂದ ದೇಶದ ಭದ್ರತೆ ಹಾಗೂ ಸಂವಿಧಾನ ರಕ್ಷಣೆಗಾಗಿ `ಸ್ಲಂ ಜನರ ಮತ’ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸ್ಲಂ ಜನರ ಪ್ರಣಾಳಿಕೆ ಸಹ ಬಿಡುಗಡೆ ಮಾಡಲಾಗಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಆನಂದಪ್ಪ ಎಸ್.ಎಲ್. ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕೆಲ ಸರ್ಕಾರಗಳಿಂದ ದೇಶದ ಸಂವಿಧಾನಕ್ಕೆ ಧಕ್ಕೆ ತರುವ ಸೂಚನೆ ಕಾಣುತ್ತಿದೆ. ದೇಶದ ಸಾರ್ವಭೌತ್ವ, ಭ್ರಾತೃತ್ವ, ಸರ್ವಧರ್ಮ ಸಮಾನತೆ ಎತ್ತಿ ಹಿಡಿಯುವ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಇದಕ್ಕಾಗಿ ಸ್ಲಂ ಜನರಲ್ಲಿ ಮತ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಘಟನೆಯ ಪ್ರಮುಖರಾದ ರೇಣುಕಾ ಯಲ್ಲಮ್ಮ ಮಾತನಾಡಿ, ನಾಳೆ ದಿನಾಂಕ 27ರಂದು ನಗರದಲ್ಲಿ ಸ್ಲಂ ಜನರ ಮತ ಜಾಗೃತಿ ಸಮಾವೇಶ ನಡೆಸಿ, ಅಲ್ಲಿ ಸ್ಲಂ ಜನರ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಪ್ರಮುಖರಾದ ಶಬ್ಬೀರ್ಸಾಬ್, ಯೂಸೂಫ್ಸಾಬ್, ಬಾಲಪ್ಪ, ಮಂಜುಳಾ, ಗೀತಮ್ಮ, ಬೀ ಬೀಜಾನ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.