ದಾವಣಗೆರೆ, ಏ. 25 – ಐ.ಐ.ಟಿ, ಎನ್.ಐ.ಟಿ, ಐ.ಐ.ಐ.ಟಿ, ಇಂಜಿನಿಯರಿಂಗ್ ಪದವಿಯ ಪ್ರವೇಶಕ್ಕೆ 2024 ರಲ್ಲಿ ನಡೆಸಲಾದ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಮಾಗನೂರು ಬಸಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ವರುಣ್ ಎಂ.ಎಸ್. ರಾಷ್ಟ್ರಮಟ್ಟದಲ್ಲಿ 144 ನೇ ರ್ಯಾಂಕ್ ಪಡೆದಿರುತ್ತಾನೆ.
ಭರತ್ ಹೆಚ್.ಆರ್ 197 ನೇ ರಾಂಕ್, ಭರತ್ ಬಿ.ಪಿ 230 ನೇ ರಾಂಕ್, ಚಂದನ ಕೆ.ಎಲ್ 239 ನೇ ರ್ಯಾಂಕ್, ಅಲಂಕಾರ್ ಹೆಚ್.ಜಿ 264 ನೇ ರ್ಯಾಂಕ್, ಅಪೇಕ್ಷ ಎಂ 298 ನೇ ರ್ಯಾಂಕ್, ಶಶಿಧರ ಜಿ 333ನೇ ರ್ಯಾಂಕ್, ಸಂಜಯ್ ಕುಮಾರ್ ಯರೇಶೀಮೆ 370 ನೇ ರ್ಯಾಂಕ್ ಪಡೆದಿರುತ್ತಾರೆ.
500 ರಾಂಕ್ ಒಳಗೆ 9 ವಿದ್ಯಾರ್ಥಿಗಳು, 2000 ರಾಂಕ್ ಒಳಗೆ 13 ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ಗಳನ್ನು ಗಳಿಸಿರುತ್ತಾರೆ. ಮಾಗನೂರು ಬಸಪ್ಪ ಕಾಲೇಜಿನ ಒಟ್ಟು 29 ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆ ಕಾರ್ಯ ದರ್ಶಿ ಸಂಗಮೇಶ್ವರ ಗೌಡರು, ನಿರ್ದೇಶಕ ಡಾ. ಜಿ.ಎನ್.ಹೆಚ್.ಕುಮಾರ್, ಪ್ರಾಚಾರ್ಯ ಪ್ರಸಾದ್ ಬಂಗೇರ ಎಸ್. ಅಭಿನಂದಿಸಿದ್ದಾರೆ.