ನಗರದಲ್ಲಿ ಇಂದು ಸತ್ಯಸಾಯಿ ಬಾಬಾರವರ ಆರಾಧನಾ ಮಹೋತ್ಸವ

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ವತಿಯಿಂದ ಆರಾಧನಾ ಮಹೋತ್ಸವವು ಪಿ.ಜೆ. ಬಡಾ ವಣೆಯ ಸತ್ಯಸಾಯಿ ಮಂದಿರದಲ್ಲಿ ಇಂದು ನಡೆಯಲಿದೆ. ಬೆಳಿಗ್ಗೆ 6.30ಕ್ಕೆ ಸಾಯೀಶ್ವರ ಲಿಂಗಕ್ಕೆ ರುದ್ರಾಭಿಷೇಕ, 11.30ಕ್ಕೆ ಸುಮಾರು ಒಂದು ಸಾವಿರ ಜನರಿಗೆ ಮಹಾನಾರಾಯಣ ಸೇವೆ, ಮಹಾ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 6.30 ರಿಂದ 7.30 ಶ್ರೀ ರುದ್ರ ಪಠಣ ಮತ್ತು ಭಜನೆ, 7.30 ರಿಂದ 8ರವರೆಗೆ ಜಗನ್ನಾಥ್ ನಾಡಿಗೇರ್ ಅವರಿಂದ ಉಪನ್ಯಾಸ, 8 ರಿಂದ 8.30 ರವರೆಗೆ ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ಹಾಗೂ ಮಹಾ ಪ್ರಸಾದ ವಿನಿಯೋಗ ನಡಯಲಿದೆ.

error: Content is protected !!