ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಸಮರ್ಥಿಸಿದ ಇಬ್ಬರ ಬಂಧನ

ಹುಬ್ಬಳ್ಳಿ, ಏ. 21 – ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಮಾಡಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥಿಸಿಕೊಂಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೇಹಾ ಹಾಗೂ ಹತ್ಯೆ ಮಾಡಿದ ಫಯಾಜ್ ನಡುವೆ ಸಂಬಂಧ ಇತ್ತು ಎಂದು ಹತ್ಯೆ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಹತ್ಯೆಗೀಡಾದ ನೇಹಾ ಹಾಗೂ ಫಯಾಜ್ ಇರುವ ಚಿತ್ರವನ್ನು ಹಂಚಿಕೊಂಡಿದ್ದ  ಇಬ್ಬರು, §ಉಭಯರದು ನಿಜವಾದ ಪ್ರೀತಿ, ಪ್ರೀತಿಗೆ ನ್ಯಾಯ ಸಿಗಲಿ’ ಎಂದಿದ್ದರು. ನಂತರ ಪೊಲೀಸರು ಸಾಧಿಕ್ ಇಮಾಮ್ ತಡಕೋಡ ಹಾಗೂ ಆದಿಲ್ ಎಂಬುವವರನ್ನು ಬಂಧಿಸಿದ್ದಾರೆ.

error: Content is protected !!