23ಕ್ಕೆ ಹಳೇಪೇಟೆ ಶ್ರೀ ವೀರಭದ್ರೇಶ್ವರ ರಥೋತ್ಸವ

23ಕ್ಕೆ ಹಳೇಪೇಟೆ ಶ್ರೀ ವೀರಭದ್ರೇಶ್ವರ ರಥೋತ್ಸವ

ದಾವಣಗೆರೆ, ಏ.19- ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ನಾಡಿದ್ದು ದಿನಾಂಕ 21 ರ ಭಾನುವಾರದಿಂದ 24 ರವರೆಗೆ ನಡೆಯಲಿದೆ. ದಿನಾಂಕ 21 ರಂದು ಬೆಳಿಗ್ಗೆ 6 ಗಂಟೆಗೆ ರುದ್ರಾಭಿಷೇಕ ಮತ್ತು ಬೆಳಿಗ್ಗೆ 9 ಗಂಟೆಗೆ ರುದ್ರ ಸಂತರ್ಪಣೆ, ದಿನಾಂಕ 22 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಮತ್ತು ಅಗ್ನಿಕುಂಡ ಹಾಗೂ ಉತ್ಸವ ನಗರದ ರಾಜಬೀದಿಗಳಲ್ಲಿ ನಡೆಯುತ್ತದೆ.

ದಿನಾಂಕ 23ರ ಸಂಜೆ 7 ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ,  ದಿನಾಂಕ 24 ರಂದು ರಾತ್ರಿ 8 ಕ್ಕೆ ಓಕುಳಿ ಉತ್ಸವ ನಡೆಯುತ್ತದೆ.

error: Content is protected !!