ಅಖಿಲ ಭಾರತ ವಿಶ್ವಕರ್ಮ ಪರಿಷತ್‌ನಿಂದ ಕಾಂಗ್ರೆಸ್‌ಗೆ ಬೆಂಬಲ

ದಾವಣಗೆರೆ, ಏ.19- ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಖಿಲ ಭಾರತ ವಿಶ್ವಕರ್ಮ ಪರಿಷತ್ ಬೆಂಬಲ ನೀಡಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಎಚ್.ವಿ.ಸತೀಶ್ ಕುಮಾರ್ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ವಿಶ್ವ ಕರ್ಮ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ವಿಶ್ವಕರ್ಮ ಸಮಾಜದವರಾಗಿದ್ದ ಪಂಜಾಬ್‌ನ ದಿ.ಗ್ಯಾನಿ ಜೈಲ್ ಸಿಂಗ್‌ರವರನ್ನು ವಿಶ್ವಕರ್ಮ ಸಮಾಜದವರು ಎಂದು ಗುರುತಿಸಿ ರಾಷ್ಟ್ರಪತಿಗಳನ್ನಾಗಿ ಮಾಡಿದ್ದನ್ನು ವಿಶ್ವಕರ್ಮ ಸಮಾಜ ಯಾವತ್ತೂ ಮರೆಯುವುದಿಲ್ಲ.

ರಾಜ್ಯದಲ್ಲಿ ವಿಶ್ವಕರ್ಮ ಜಯಂತಿ, ಜಕಣಾಚಾರಿ ಸ್ಮರಣೋತ್ಸವ ಹಾಗು ವಿಶ್ವಕರ್ಮ ಅಭಿವೃದ್ಧಿ ನಿಗಮ,  ಸಿದ್ದರಾಮ ಯ್ಯನವರ ಸರ್ಕಾರ ಮಾಡಿರುವುದನ್ನು ನಾವು ಮರೆಯುವ ಹಾಗಿಲ್ಲ. ಈ ರೀತಿಯಾಗಿ ನಮ್ಮ ಸಮಾಜದ ಸಾಕಷ್ಟು ಅಭಿವೃದ್ಧಿಯನ್ನು ಕಾಂಗ್ರೆಸ್ ಮಾಡಿರುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಕಾಳಾಚಾರಿ, ಎಚ್.ಎನ್.ಜಯಾಚಾರ್ ಹಿರೇಮೆಗಳಗೇರಿ, ಕೆ.ಸೋಮಶೇಖರಚಾರ್ ನಿಟ್ಟುವಳ್ಳಿ ಇದ್ದರು.

error: Content is protected !!