ಹಾಡು ಹಗಲೇ ವಿದ್ಯಾರ್ಥಿನಿಯ ಬರ್ಬರ ಹತ್ಯೆ: ಆವರಗೊಳ್ಳ ಓಂಕಾರ ಶ್ರೀ ಖಂಡನೆ

ದಾವಣಗೆರೆ, ಏ.19- ಹುಬ್ಬಳ್ಳಿಯ ನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಪುತ್ರಿ 24 ವರ್ಷದ ನೇಹಾ ಹಿರೇಮಠ ಅವರನ್ನು ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ಬರ್ಬರವಾಗಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ ಮತ್ತು ಕ್ರೌರ್ಯವಾ ಗಿದ್ದು, ಇದು ಮಾನವೀಯತೆಯ ಕಗ್ಗೊಲೆ ಯಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಕೃತ್ಯವನ್ನು ನೋಡಿ ಸಾರ್ವತ್ರಿಕವಾಗಿ ಮಕ್ಕಳನ್ನು ಯಾವ ಧೈರ್ಯದಿಂದ ಓದಲಿಕ್ಕೆ ಶಾಲಾ-ಕಾಲೇಜಿಗೆ ಹೊರಗಡೆ ಕಳಿಸಬೇಕೆಂದು ಪೋಷಕರು ದಿಗ್ಬ್ರಾಂತರಾಗಿದ್ದಾರೆ. ಅಷ್ಟೇ ಅಲ್ಲದೇ ಹೆತ್ತ ತಂದೆ-ತಾಯಂದಿರ ಎದೆಗೆ ಸಿಡಿಲು ಬಡಿದಂತಾಗಿದೆ ನೇಹಾಳ ಹತ್ಯೆ. ನೇಹಾಳ ಹತ್ಯೆ ಅಷ್ಟೇ ಅಲ್ಲದೇ ದೇಶದೆಲ್ಲೆಡೆ ಅಮಾಯಕರ ಕಗ್ಗೊಲೆಗಳು ದುರುಳರಿಂದ ಎಗ್ಗಿಲ್ಲದೇ ನಿರಂತರ ನಡೆಯುತ್ತಲೇ ಇವೆ ಎಂದು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆಯನ್ನು ಧಿಕ್ಕರಿಸಿ, ಈ ದುಷ್ಟರು ಮಾಡಿದ ದುಷ್ಕೃತ್ಯಗಳಿಗೆ ಯಾವುದೇ ರಾಜಕೀಯ, ಜಾತಿ, ಧರ್ಮದ, ಲೇಪನ ಮಾಡದೇ ಮಾನವೀಯತೆಯಿಂದ ಖಂಡಿಸುವ ಮೂಲಕ ಈ ಕೃತ್ಯ ಎಸಗಿದ ಪಾಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಸಮಾಜದಲ್ಲಿ ಮುಂದೆ ಇಂತಹ ಹೇಯ ಕೃತ್ಯಗಳು ನಡೆಯದಂತೆ ಸರ್ಕಾರ ದಿಟ್ಟ ಕ್ರಮದಿಂದ ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.

error: Content is protected !!