ಚುನಾವಣಾ ವೇಳೆ ಸರ್ವಾಧಿಕಾರಿಯಂತೆ ರಾಜ್ಯಕ್ಕೆ ಬರುವ ಮೋದಿ: ಡಿಬಿ ಆರೋಪ

ಚುನಾವಣಾ ವೇಳೆ ಸರ್ವಾಧಿಕಾರಿಯಂತೆ ರಾಜ್ಯಕ್ಕೆ ಬರುವ ಮೋದಿ: ಡಿಬಿ ಆರೋಪ

ದಾವಣಗೆರೆ, ಏ. 14 – ಕರ್ನಾಟಕದ ಜನತೆ ಅತಿವೃಷ್ಟಿ, ಅನಾವೃಷ್ಟಿಯಿಂದ ನಲುಗಿ ಹೋದಾಗ ರಾಜ್ಯಕ್ಕೆ ಒಮ್ಮೆಯೂ ಭೇಟಿ ನೀಡಿ ಜನರ ಸಂಕಷ್ಟ ಆಲಿಸದ ಪ್ರಧಾನಿ ಮೋದಿ ಅವರು, ಚುನಾವಣೆ ಬಂದಾಗ ಮಾತ್ರ ಹಿಂದೆ ರಾಜರುಗಳು ಬೇರೆ ರಾಜ್ಯಗಳ ಮೇಲೆ ದಾಳಿ ನಡೆಸುತ್ತಿದ್ದಂತೆ, ಈಗ ರಾಜ್ಯಕ್ಕೆ ಮತ ಭಿಕ್ಷೆಗಾಗಿ ದಂಡೆತ್ತಿ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆರೋಪಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಕನ್ನಡಿಗರ ತೆರಿಗೆ ಪಾಲು ನೀಡದೆಯೇ ರಾಜ್ಯಕ್ಕೆ ಕೇವಲ ಮತ ಬೇಟೆಗೆ ಬರುವ ನರೇಂದ್ರ ಮೋದಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಮಂಗಳಾರತಿ ಮಾಡಿದಂತೆ ಈ ಬಾರಿಯೂ ಮಾಡಲಿದ್ದಾರೆ ಎಂದರು. ಚುನಾವಣೆಯನ್ನು ನೇರವಾಗಿ ಎದುರಿಸಲಾಗದ ನರೇಂದ್ರ ಮೋದಿ ಇಡಿ, ಐಟಿ, ಸಿಬಿಐ ಸೇರಿದಂತೆ ಇತರೆ ಸ್ವಾಯತ್ತ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಬಂಧಿಸುವ ಮೂಲಕ ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಚ್. ಉದಯಕುಮಾರ್, ಡಿ. ಶಿವಕುಮಾರ್. ಎಂ.ಕೆ. ಲಿಯಾಖತ್ ಅಲಿ, ಡಿ.ಎಸ್. ಸುರೇಶ್, ಮುಬಾರಕ್ ಇದ್ದರು.

error: Content is protected !!