ದಾವಣಗೆರೆ, ಏ.14- ತಾಲ್ಲೂಕಿನ ನಾಗರಸನಹಳ್ಳಿಯ ಶ್ರೀ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ನಾಡಿದ್ದು ದಿನಾಂಕ 16, 17 ಮತ್ತು 18 ರಂದು ನಡೆಯಲಿದೆ.
ನಾದಿದ್ದು ದಿನಾಂಕ 16ರ ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಶ್ರೀ ಸ್ವಾಮಿಗೆ ಮಹಾರುದ್ರಾಭಿಷೇಕ, ಸಂಜೆ ಮುತ್ತೇನಹಳ್ಳಿ ಶ್ರೀ ದುರ್ಗಾಂಭಿಕಾದೇವಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಯನ್ನು ಗ್ರಾಮಕ್ಕೆ ಬರಮಾಡಿಕೊಳ್ಳುವುದು. ರಾತ್ರಿ 9 ಗಂಟೆಗೆ ಹೂವಿನ ಪಲ್ಲಕ್ಕಿ ಮೆರವಣಿಗೆ ಜರುಗುವುದು.
ದಿನಾಂಕ 17ರ ಬುಧವಾರ ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ, ಉಚ್ಛಾಯ, ಕೆಂಡದಾರ್ಚನೆ, ದಿನಾಂಕ 18ರ ಗುರುವಾರ ಸಂಜೆ 4 ಗಂಟೆಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ.