ಹರಿಹರ: ಸಂತ ಅಲೋಶಿಯಸ್ ಪಿಯು ಕಾಲೇಜಿಗೆ ಶೇ.97 ಫಲಿತಾಂಶ

ಹರಿಹರ: ಸಂತ ಅಲೋಶಿಯಸ್  ಪಿಯು ಕಾಲೇಜಿಗೆ ಶೇ.97 ಫಲಿತಾಂಶ

ಹರಿಹರ,ಏ.11-  ನಗರದ  ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97ರಷ್ಟು ಫಲಿತಾಂಶ ಬಂದಿದೆ.   

ಕಲಾ ವಿಭಾಗದಲ್ಲಿ-100%, ವಾಣಿಜ್ಯ ವಿಭಾಗದಲ್ಲಿ- ಶೇ. 100,  ವಿಜ್ಞಾನ ವಿಭಾಗದಲ್ಲಿ ಶೇ. 95 ಫಲಿತಾಂಶ ಬಂದಿದ್ದು,   ವಿಜ್ಞಾನ ವಿಭಾಗದಲ್ಲಿ 20 ಡಿಸ್ಟಿಂಕ್ಷನ್,  ವಾಣಿಜ್ಯ ವಿಭಾಗದಲ್ಲಿ  7 ಡಿಸ್ಟಿಂಕ್ಷನ್,   ಕಲಾ ವಿಭಾಗದಲ್ಲಿ 6 ಡಿಸ್ಟಿಂಕ್ಷನ್    ಸೇರಿ ಒಟ್ಟಾರೆ 33 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 89 ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿಯಲ್ಲಿ, 16 ವಿದ್ಯಾರ್ಥಿಗಳು ದ್ವಿತೀಯ   ಹಾಗೂ  5 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ  ಹೊಂದಿರುತ್ತಾರೆ. 

ಈ ಎಲ್ಲಾ ವಿದ್ಯಾರ್ಥಿಗಳಿಗೆ  ಕಾಲೇಜಿನ ಮುಖ್ಯಸ್ಥರಾದ  ಫಾದರ್ ಎರಿಕ್ ಮಥಾಯಸ್ ಎಸ್. ಜೆ. ಅಭಿನಂದಿಸಿದ್ದಾರೆ.

error: Content is protected !!