ಬಿಎಸ್ಸೆನ್ನೆಲ್‌ನಿಂದ 4ಜಿ ಕಾರ್ಡ್

ದಾವಣಗೆರೆ, ಏ.5- ಬಿಎಸ್ಸೆನ್ನೆಲ್ ಈಗ ತನ್ನ ಬಳಕೆದಾರರಿಗೆ ಉಚಿತ 4ಜಿ ಸಿಮ್ ಅಪ್‍ಗ್ರೇಡ್‍ಗಳನ್ನು ನೀಡುತ್ತಿದೆ. ಬಿಎಸ್ಸೆನ್ನೆಲ್ ಬಳಕೆದಾರರಾಗಿದ್ದಲ್ಲಿ ಈಗಿರುವ 2ಜಿ, 3ಜಿ ಬದಲಿಗೆ ವೇಗದ 4ಜಿ ನೆಟ್‍ವರ್ಕ್ ಪಡೆಯಲು ಬಯಸಿದರೆ, ಮೂಲ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಯಾವುದೇ ಬಿಎಸ್ಸೆನ್ನೆಲ್ ಗ್ರಾಹಕರ ಸೇವಾ ಕೇಂದ್ರ, ಪ್ರಾಂಚೈಸಿ, ಸಿಎಸ್‍ಸಿಗಳಲ್ಲಿ ಉಚಿತ 4ಜಿ ಸಿಮ್ ಪಡೆಯಬಹುದಾಗಿದೆ.

ಬಿಎಸ್ಸೆನ್ನೆಲ್ ಬಳಕೆದಾರರ ಗುರುತಿನ ಡಿಜಿಟಲ್ ಪರಿಶೀಲನೆ :  ಬಿಎಸ್‍ಎನ್‍ಎಲ್‍ನ ಎಲ್ಲಾ ಗ್ರಾಹಕರು ಈ ಹಿಂದೆ ಕಾಗದದ ಅರ್ಜಿ ಸಲ್ಲಿಸುವ ಮೂಲಕ ಮೊಬೈಲ್ ಸಿಮ್ ತೆಗೆದುಕೊಂಡ ಎಲ್ಲಾ ಗ್ರಾಹಕರು ಡಿಜಿಟಲ್ ಮೋಡ್‍ನಲ್ಲಿ ಮರುಪರಿಶೀಲಿಸಿಕೊಳ್ಳಬೇಕು. ಇದು ಅಸ್ತಿತ್ವದಲ್ಲಿರುವ ಬಳಕೆ ದಾರರ ಗುರುತನ್ನು ದೃಢೀಕರಿಸುವ ಪ್ರಕ್ರಿಯೆಯಾಗಿದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಯಾವುದೇ ಬಿಎಸ್‍ಎನ್‍ಎಲ್ ಗ್ರಾಹಕರ ಸೇವಾ ಕೇಂದ್ರ, ಬಿಎಸ್‍ಎನ್‍ಎಲ್ ಫ್ರಾಂಚೈಸಿ ಮತ್ತು ರಿಟೇಲರ್ ಅಂಗಡಿಯಲ್ಲಿ ಮರುಪರಿಶೀಲಿಸಬಹುದು.

ಮರುಪರಿಶೀಲನೆಯ ಅಗತ್ಯವಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಗ್ರಾಹಕರು ಇದೇ ದಿನಾಂಕ 30 ರ ಮೊದಲು ಮರುಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಎಸ್‍ಎನ್‍ಎಲ್ ಮ್ಯಾನೇಜರ್ ತಿಳಿಸಿದ್ದಾರೆ.

error: Content is protected !!