4.33 ಕೋಟಿ ರೂ. ಲಾಭದಲ್ಲಿ ಹರಿಹರ ತುಂಗಭದ್ರಾ ಸೊಸೈಟಿ

4.33 ಕೋಟಿ ರೂ. ಲಾಭದಲ್ಲಿ ಹರಿಹರ ತುಂಗಭದ್ರಾ ಸೊಸೈಟಿ

ಹರಿಹರ, ಏ.2- ನಗರದ ತುಂಗಭದ್ರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಾರ್ಚ್ 31ಕ್ಕೆ ಮುಕ್ತಾಯಗೊಂಡ ಆರ್ಥಿಕ ವರ್ಷ 2023-24ನೇ ಸಾಲಿನಲ್ಲಿ 4 ಕೋಟಿ 33 ಲಕ್ಷ  ರೂ. ಲಾಭ ಗಳಿಸಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎಂ. ಶಿವಾನಂದಪ್ಪ  ತಿಳಿಸಿದ್ದಾರೆ   

ತುಂಗಭದ್ರಾ   ಸೊಸೈಟಿ  ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ  ಸಭೆಯ ಅಧ್ಯಕ್ಷತೆ ವಹಿಸಿ   ಮಾತನಾಡಿದ ಅವರು,  ಷೇರು ಬಂಡವಾಳ 3.09 ಕೋಟಿ ರೂ.ಗಳು, ಕಾಯ್ದಿಟ್ಟ ನಿಧಿ 23.76 ಕೋಟಿ ರೂ.ಗಳು, ಠೇವಣಿಗಳು 55.50 ಕೋಟಿ ರೂ. ಇದ್ದು,  ಕೊಟ್ಟಿರುವ ಸಾಲಗಳು 75.40 ಕೋಟಿ ರೂಗಳು ಎಂದು ವಿವರಿಸಿದರು.

ಉತ್ತಮ ಸ್ಥಾನ ಗಳಿಸಲು ಸಂಘದ ಠೇವಣಿದಾರರು, ಗ್ರಾಹಕರು, ಸರ್ವ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು,   ಸಿಬ್ಬಂದಿ ವರ್ಗ ಮತ್ತು ಪಿಗ್ಮಿ ಸಂಗ್ರಹಕಾರರು ಕಾರಣವಾಗಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಆರ್.ಕೆ.ಮಂಜುನಾಥ್, ನಿರ್ದೇಶಕರಾದ ಹೇಮಂತರಾಜ್.ಡಿ, ಜಿ.ಎಸ್.ಚನ್ನಬಸಪ್ಪ, ಸೈಯದ್ ಇಫ್ತೇಖಾರ್ ಅಹ್ಮದ್, ಬಿ.ಮಂಜಪ್ಪ, ಪಿ.ಶಿವಣ್ಣ, ಎಂ.ಹನುಮಂತಪ್ಪ, ಪ್ರಕಾಶ್ ದಿವಟೆ, ಕೆ.ಬಿ.ಮಂಜುನಾಥ್, ಸಂಜಯ್, ಮಂಜುನಾಥ್, ಶ್ರೀಮತಿ ಎಲ್.ಪಿ. ಮಮತಾ ಮತ್ತು ಶ್ರೀಮತಿ ಎ.ಬಿ.ಗಂಗಮ್ಮ ಹಾಗೂ ವಿಶೇಷ ಆಹ್ವಾನಿತ ರಾದ  ಕೆ.ಶರಣಪ್ಪಯ್ಯ   ಮತ್ತು ಹೆಚ್. ಪಾಲಾಕ್ಷಪ್ಪ,  ಸಂಘದ ಕಾರ್ಯದರ್ಶಿ ಬಿ.ಜಿ.ಶರತ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!