ಶಿಗ್ಗಾಂವಿ ಬಳಿಯ ಅಪಘಾತದಲ್ಲಿ ಮೂವರ ಸಾವು

ಹಾವೇರಿ, ಏ. 2 –  ಕುರಿ ತುಂಬಿದ್ದ ಬೊಲೆರೊ ವಾಹನವೊಂದು ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವಿ ಗೀಡಾಗಿರುವ ಘಟನೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಬಳಿ ಇಂದು ಸಂಜೆ ನಡೆದಿದೆ. ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ಗುಡ್ಡಪ್ಪ ಕೈದಾಳಿ (40), ಮೈಲಾ ರಪ್ಪ ಕೈದಾಳಿ (41), ಶಿವರಾಜ್ ಹೊಳೆಪ್ಪನವರ (22) ಮೃತಪಟ್ಟಿದ್ದಾರೆ. ಬೆಳಗಾವಿಯಿಂದ ಕಾಕೋಳ ಗ್ರಾಮಕ್ಕೆ ಬರುವಾಗ ಮಾರ್ಗ ಮಧ್ಯೆ ಈ ದುರಂತ ಸಂಭವಿಸಿದೆ. 

error: Content is protected !!