ಹರಿಹರದಲ್ಲಿ ಮನೆ ಕಳ್ಳತನ

ದಾವಣಗೆರೆ, ಏ.1- ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಇಂಟರ್‌ಲಾಕ್ ತೆಗೆದು ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ಹರಿಹರ ನಗರದ ರಾಜಾರಾಮ್ ಕಾಲೋನಿಯಲ್ಲಿ ಮೊನ್ನೆ ಶನಿವಾರ ನಡೆದಿದೆ. ಬೆಡ್‌ ರೂಂನ ಗಾಡ್ರೇಜ್ ಲಾಕರ್‌ನಲ್ಲಿದ್ದ 3.10 ಲಕ್ಷ ರೂ. ಮೌಲ್ಯದ ಚನ್ನಾಭರಣಗಳು ಕಳ್ಳತನವಾಗಿರುವುದಾಗಿ ಮುಸ್ಕಾನ್ ತಾಜ್ ಅವರು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!